ನಾಳೆಯಿಂದ ಪೆಂಕಾಕ್​ ಸಿಲತ್​ ರಾಷ್ಟ್ರೀಯ ಕ್ರೀಡಾಕೂಟ

district koppal pencoc silt sports national level logo release
Published on

ಕೊಪ್ಪಳ: ನಾಳೆಯಿಂದ ಮೂರು ದಿನಗಲ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪೆಂಕಾಕ್​ ಸಿಲತ್​ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ. ಮೊದಲ ಬಾರಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.

ನಗರದ ತಮ್ಮ ನಿವಾಸದಲ್ಲಿ ಗುರುವಾರ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಮೊದಲ ಬಾರಿಗೆ 27 ರಾಜ್ಯಗಳ 1200ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಹಾಗೂ 250 ಜನ ಕೋಚ್​, ಮ್ಯಾನೇಜರ್​ ರೆಫರಿಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತರಿಗೆ ಸಮಗ್ರ ಪ್ರಶಸ್ತಿಯನ್ನು ನಾಲ್ಕು ವಿಭಾಗದಲ್ಲಿ ನೀಡಲಾಗುತ್ತಿದೆ. ರಾಷ್ಟ್ರೀಯ ಕ್ರೀಡಾ ಮಂತ್ರಾಲಯ, ಸಾಯಿ, ಇಂಟರ್​ನ್ಯಾಷನಲ್​ ಓಲಂಪಿಕ್​ ಮಾನ್ಯತೆ ಹೊಂದಿರುವ ಎಲ್ಲಾ ವಿಭಾಗದಲ್ಲಿ ಕ್ರೀಡೆ ಇರಲಿವೆ. ಸಿಂಗಾ, ಮೆಕಾನ್​, ಪ್ರಿ-ಟೀನ್​, ಸಬ್​ ಜೂನಿಯರ್​ ಮತ್ತು ಜೂನಿಯರ್​ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.

ಆಯೋಜಕರಾದ ಮಂಜುನಾಥ ಗೊಂಡಬಾಳ, ಅಬ್ದುಲ್​ ರಜಾಕ್​ ಟೈಲರ್​, ಮೌನೇಶ ವಡ್ಡಟ್ಟಿ, ಈರಣ್ಣ ಬದಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net