

ಕೊಪ್ಪಳ: ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಮತ್ತು ಲಿಂಗ ಅಸಮಾನತೆ ತಡೆಯುವುದು ಪಿ.ಸಿ.&ಪಿ.ಎನ್.ಡಿ.ಟಿ ಕಾಯ್ದೆಯ ಮೂಲ ಉದ್ದೇಶ. ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ ಎಂದು ಡಿಎಚ್ಒ ಡಾ.ಟಿ.ಲಿಂಗರಾಜು ಹೇಳಿದರು.
ನಗರದ ಡಿಎಚ್ಒ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಿ.ಸಿ.&ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಿತಿ ಸದಸ್ಯರು ಜಿಲ್ಲೆಯಲ್ಲಿ ಸ್ಕಾ$ನಿಂಗ್ ಸೆಂಟರ್ಗಳಿಗೆ ತೆರಳಿ ತಪಾಸಣೆ ನಡೆಸಬಹುದು. ಪ್ರಸವಪೂರ್ವ ಲಿಂಗ ಪತ್ತೆಗೆ ಅವಕಾಶವಿಲ್ಲ. ಈ ಬಗ್ಗೆ ಸ್ಕಾ$ನಿಂಗ್ ಸೆಂಟರ್ನಲ್ಲಿ ಮಾಹಿತಿ ಲಕ ಅಳವಡಿಸಬೇಕು. ಆದರೂ ಅಲ್ಲಲ್ಲಿ ಲಿಂಗ ಪತ್ತೆ ಆರೋಪ ಕೇಳಿ ಬರುತ್ತವೆ. ಈ ಬಗ್ಗೆ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ದೂರು ನೀಡಬಹುದು. ಜಿಲ್ಲೆಯಲ್ಲಿ ಈವರೆಗೆ ಇಂಥ ಪ್ರಕರಣ ವರದಿಯಾಗಿಲ್ಲ. ಮುಂದೆಯೂ ಈ ಬಗ್ಗೆ ಎಚ್ಚರವಹಿಸಬೇಕಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್.ಮಾತನಾಡಿ, ಜಿಲ್ಲೆಯ ಸ್ಕಾ$ನಿಂಗ್ ಸೆಂಟರ್ನಲ್ಲಿ ಾರಂ ಎ್ ಸೆರಿ ಅಗತ್ಯ ದಾಖಲೆ ನಿರ್ವಹಣೆ ಕಡ್ಡಾಯವಾಗಿ ಮಾಡಬೇಕು. ಪಿಸಿ, ಪಿಎನ್ಡಿಟಿಯಡಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಅವಧಿ ಮುಗಿವ ಮೂರು ತಿಂಗಳು ಮುಂಚೆ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಬೇಕು. ಮಾರ್ಗಸೂಚಿಗಳನ್ನು ಪಾಲಿಸಿ ನಿಗದಿತ ನಮೂನೆಗಳನ್ನು ನಿರ್ವಹಿಸಿ. ದಾಖಲೆ ನಿರ್ವಹಿಸದಿದ್ದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು. ಯಾವುದೇ ವೈದ್ಯರು ಭಾಗಿಯಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪ್ರಾಪ್ತರು ಸ್ಕಾ$ನಿಂಗ್ಗೆ ಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳ ನೋಂದಣಿ, ನವೀಕರಣ ಹಾಗೂ ಹೊಸ ಅರ್ಜಿಗಳ ಅನುಮತಿ ಕುರಿತು ಚರ್ಚಿಸಲಾಯಿತು. ಸಮಿತಿ ಸದಸ್ಯರಾದ ಡಾ.ಈಶ್ವರ ಸವಡಿ, ಮಕ್ಕಳ ತಜ್ಞ ಡಾ.ಶಶಿಕಾಂತ, ರೆಡ್ಕ್ರಾಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ ಹ್ಯಾಟಿ, ಯೂನಿಸ್ೆ ಸಂಯೋಜಕ ಹರೀಶ ಜೋಗಿ ಇತರರಿದ್ದರು.