ಕೊಪ್ಪಳದಲ್ಲಿ ಇಬ್ಬರು ಪಾಕ್​ ಪ್ರಜೆಗಳ ವಾಸ

Published on

ಕೊಪ್ಪಳ: ಕಾಶ್ಮೀರ ಉಗ್ರ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದಲ್ಲಿನ ಪಾಕ್​ ಪ್ರಜೆಗಳು ದೇಶ ತೊರೆಯುವಂತೆ ಸೂಚನೆ ನೀಡಿದೆ. ಜಿಲ್ಲೆಯಲ್ಲೂ ಇಬ್ಬರು ಪಾಕ್​ ಮಹಿಳೆಯರು ವಾಸವಿದ್ದು, ಒಬ್ಬರು ದಾಳಿಗೂ ಮುನ್ನ ಪಾಕಿಸ್ತಾನಕ್ಕೆ ತೆರಳಿದ್ದರೆ, ಇನ್ನೊಬ್ಬರು ಇಲ್ಲೇ ನೆಲೆಸಿದ್ದಾರೆ.

ಇಬ್ಬರು ಜಿಲ್ಲೆಯ ಯುವಕರನ್ನು ಮದುವೆಯಾಗಿದ್ದು ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾರೆ. ಪ್ರತಿ ವರ್ಷ ವಿಸಾ ನವೀಕರಿಸಿಕೊಂಡು ವಾಸವಿದ್ದಾರೆ. ಇಬ್ಬರು ಮಹಿಳೆಯರ ವಿಸಾ ಅವಧಿ ಬರುವ ಮೇ 26 ಮತ್ತು 27ರಂದು ಕೊನೆಗೊಳ್ಳಲಿದೆ. ಓರ್ವ ಮಹಿಳೆ ಕುಟುಂಬದವರನ್ನು ಭೇಟಿ ಮಾಡಲು ಈಗಾಗಲೇ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಒಬ್ಬರು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ದೀರ್ಘಾವಧಿ ವಿಸಾ ಹೊಂದಿದ್ದು ಕೇಂದ್ರದ ನಿಷೇಧಾಜ್ಞೆ ವ್ಯಾಪ್ತಿಗೆ ಒಳಪಡುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net