ಭೀಮವ್ವಗೆ ಬಿಜೆಪಿ ನಾಯಕರಿಂದ ಸನ್ಮಾನ

district koppal padma award bhimajji bjp leaders visit
Published on

ಕೊಪ್ಪಳ: ತೊಗಲುಗೊಂಬೆ ಕಲಾವಿದೆ, ಮೋರನಾಳದ ಭೀಮವ್ವ ಶಿಳ್ಳಿಕ್ಯಾತರ್ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರಿ ನೀಡಿ ಗೌರವಿಸಿರುವುದು ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಹೇಳಿದರು.

ತಾಲೂಕಿನ ಮೋರನಾಳ ಗ್ರಾಮದ ಭೀಮವ್ವಗೆ  ಬಿಜೆಪಿಯಿಂದ ಸೋಮವಾರ ಸನ್ಮಾನ ನೆರವೇರಿಸಿ ಮಾತನಾಡಿದರು.

ತೊಗಲುಗೊಂಬೆ ಕಲೆ ಸನಾತನ ಜಾನಪದ ಸಂಸತಿಯ ಪ್ರತಿಕಗಳಲ್ಲೊಂದು. ರಾಮಾಯಣ, ಮಹಾಭಾರತ, ಕಲೆ, ಸಂಸತಿಯನ್ನು ಇಂಥ ಕಲೆಗಳು ಇನ್ನು ಜೀವಂತವಿರಿಸಿವೆ. ಕಳೆದ ಆರೇಳು ದಶಕದಿಂದ ಭೀಮವ್ವ ಶಿಳ್ಳಿಕ್ಯಾತರ ಕುಟುಂಬ ಈ ಕಲೆಯನ್ನು ಉಳಿಸಿಕೊಂಡು ಪೋಷಿಸುತ್ತಿದೆ. ಯುಪಿಎ ಸರ್ಕಾರ ನಿಜವಾದ ಸಾಧಕರನ್ನು ಗುರುತಿಸುವಲ್ಲಿ ವಿಲವಾಗಿದೆ. ಮೋದಿ ನೇತೃತ್ವದ ಸರ್ಕಾರ ಸಾಧನೆ ಮಾಡಿ ಎಲೆಮರೆ ಕಾಯಂತಿರುವವರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ನಾನು ಸಚಿವನಾಗಿದ್ದಾಗ ಭೀಮವ್ವಗೆ ಹಿರಿಯ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಇವರ ಸಾಧನೆ ಗುರುತಿಸಿ ಪದ್ಮಶ್ರೀ ನೀಡಿದ್ದು ಸಂತಸ ಹೆಚ್ಚಿಸಿದೆ. ನಮ್ಮ ಜಿಲ್ಲೆಯ ಸಾಧಕಿಗೆ ಪ್ರಶಸ್ತಿ ಬಂದಿದ್ದು ಜಿಲ್ಲೆಯ ಹಿರಿಮೆ ಹೆಚ್ಚಿಸಿದೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಪ್ರಮುಖರಾದ ಚಂದ್ರು ಪಾಟೀಲ್ ಹಲಗೇರಿ, ಮಹಾಂತೇಶ ಪಾಟೀಲ್ ಮೈನಳ್ಳಿ, ಗಣೇಶ ಹೊರತಟ್ನಾಳ, ಪ್ರದಿಪ್ ಹಿಟ್ನಾಳ, ವಿರೇಶ ಸಜ್ಜನ, ವಾಣಿಶ್ರೀ ಮಠದ, ಕೀರಪ್ಪ ಆರೇರ, ವೆಂಕಟೇಶ ಹಾಲವರ್ತಿ, ಪಾಂಡು ಹಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net