ಒಣಗುತ್ತಿರುವ ಭತ್ತ ಬೆಳೆ, ಆತಂಕದಲ್ಲಿ ಅನ್ನದಾತರು

district koppal paddy crop tb dam
Published on

ಕೊಪ್ಪಳ: ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಸೇರಿ ಸುತ್ತಲಿನ ಗ್ರಾಮದಲ್ಲಿ ಭತ್ತ ಬೆಳೆ ಒಣಗುತ್ತಿದ್ದು ಅನ್ನದಾತರು ಕಂಗಾಲಾಗಿದ್ದಾರೆ.

ಹಲವು ವರ್ಷಗಳ ಬಳಿಕ ತುಂಗಭದ್ರಾ ಜಲಾಶಯ ಹಲವು ವರ್ಷಗಳ ಬಳಿಕ ಭರ್ತಿಯಾಗಿದ್ದು, ಎರಡು ಬೆಳೆಗೆ ನೀರು ದೊರೆತಿದೆ. ಮಾರ್ಚ್​ ಅಂತ್ಯದವರೆಗೆ ಕಾಲುವೆಗೆ ನೀರು ಸಿಗಲಿದೆ. ಈ ವರ್ಷ ಎರಡು ಬೆಳೆ ಬೆಳೆದು ಹಿಂದಿನ ವರ್ಷಗಳ ನಷ್ಟ ಭರ್ತಿ ಮಾಡಿಕೊಳ್ಳಬೇಕೆಂಬ ಆಸೆಯಲ್ಲಿದ್ದರು. ಆದರೆ, ನಾಟಿ ಮಾಡಿ 45&50 ದಿನಗಳ ಭತ್ತ ಏಕಾಏಕಿ ಒಣಗುತ್ತಿದೆ. ನೀರು ಹರಿಸಿ, ರಸಾಯನಿಕ ಗೊಬ್ಬರ ನೀಡಿದ್ದರೂ ಹಸಿರು ಕಾಯ್ದುಕೊಳ್ಳುತ್ತಿಲ್ಲ. ಸಂಪೂರ್ಣ ಒಣಗಿದ್ದು, ಬೆಳೆ ಸುಧಾರಣೆ ಕಾಣುವ ಲಕ್ಷಣಗಳಿಲ್ಲ. 20&25ರೈತರ ಗದ್ದೆಗಳು ಒಣಗಿವೆ.

ಹೊಸದಾಗಿ ಮಾರುಕಟ್ಟೆಗೆ ಬಂದ ವಿವಿಧ ರಸಾಯನಿಕ ಗೊಬ್ಬರಗಳನ್ನು ಸಿಂಪಡಣೆ ಮಾಡಿರುವುದಾಗಿ ರೈತರು ಹೇಳುತ್ತಿದ್ದಾರೆ. ಅದರಲ್ಲಿ ಸಾರಜನಕ, ಾಸ್ಪೆಟ್​, ಸಲ್ಪೇಟ್​ ಇನ್ನಿತರ ಸಂಯುಕ್ತಗಳ ಪ್ರಮಾಣ ಎಷ್ಟಿದ ಎಂಬ ಅರಿವಿಲ್ಲ ಎನ್ನುತ್ತಿದ್ದಾರೆ. ಹಾಗೇ ಹಾಕಿದ್ದು ಬೆಳೆ ಒಣಗುತ್ತಿದೆ. ಯಾಕೆಂಬ ನಿಖರ ಕಾರಣ ಗೊತ್ತಿಲ್ಲ. ದಿಢೀರ್​ ಹೀಗಾಗಿದ್ದು, ಎರಡನೇ ಬೆಳೆ ಬಹುತೇಕ ಖೋತಾ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರವಾಗಿ ಭತ್ತ ಬೆಳೆಯುತ್ತಿದ್ದು ಭೂಮಿಯಲ್ಲಿನ ಫಲವತ್ತತೆ ಕಡಿಮೆಯಾಗುತ್ತಿದೆ. ಇದರಿಂದ ಸವಳು ಹೆಚ್ಚುತ್ತಿದೆ. ಬೆಳೆ ಬದಲಾವಣೆ ಮಾಡಬೇಕು. ಹಸಿರೆಲೆ ಗೊಬ್ಬರ ಬಳಕೆ ಮಾಡಬೇಕು. ಈ ಮೂಲಕ ಮಣ್ಣಿನ ಲವತ್ತತೆ ಕಾಪಾಡಿಕೊಂಡಲ್ಲಿ ಉತ್ತಮ ಬೆಳೆ ಬರಲಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿ ಡಾ. ರವಿ ಎಂ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಬೇಕೆಂಬುದು ರೈತರ ಒತ್ತಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net