ಕೊಪ್ಪಳ ಹಿಪ್​ ಸಮ್ಮೇಳನ 6ರಿಂದ

Published on

ಕೊಪ್ಪಳ: ಕಿಮ್ಸ್​ ಹಾಗೂ ಕೊಪ್ಪಳ ಆರ್ಥೊಪಿಡಿಕ್​ ಅಸೋಸಿಯೇಷನ್​ನಿಂದ ಸೆ.6ಮತ್ತು 7ರಂದು ಕಿಮ್ಸ್​ ಸಭಾಂಗಣದಲ್ಲಿ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಸಿ.ಬಿ.ಚಿನಿವಾಲರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದ ಎಲ್ಲ ಎಲುಬು&ಕೀಲು ತಜ್ಞರು ಸಂಟನೆ ಮಾಡಿಕೊಂಡಿದ್ದೇವೆ. 2,600 ವೈದ್ಯರು ನೋಂದಾಯಿಸಿಕೊಂಡಿದ್ದೇವೆ. ಸಮ್ಮೇಳನದಲ್ಲಿ ರಾಜ್ಯದ ತಜ್ಞ ವೈದ್ಯರು ಆಗಮಿಸಲಿದ್ದಾರೆ. ವೈದ್ಯಕಿಯ ವಿದ್ಯಾರ್ಥಿಗಳು, ನವ ವೈದ್ಯರಿಗೆ ತಮ್ಮ ಅನುಭವದ ಮಾತುಗಳು, ವೃತ್ತಿ ಅನುಭವ, ಎಲುಬು&ಕೀಲು ವಿಭಾಗದಲ್ಲಿನ ಸುಧಾರಿತ ಚಿಕಿತ್ಸಾ ಕ್ರಮಗಳು, ತಂತ್ರಜ್ಞಾನ ಬಳಕೆ ಬಗ್ಗೆ ಉಪನ್ಯಾಸ ನೀಡುವರು. ಕಿಮ್ಸ್​ ನಿರ್ದೇಶಕ ಡಾ.ವಿಜಯನಾಥ ಇಟಗಿ, ಡಾ.ಅನಿಲ್​ ಬಿ. ಪಾಟೀಲ್​, ಡಾ.ಹರಿಶ್​ಮೂರ್ತಿ, ಡಾ.ಗುರುರಾಜ, ಡಾ. ಬಸವರಾಜ ಕ್ಯಾವಟರ್​, ಡಾ.ಪ್ರಭುಲಿಂಗನಗೌಡ, ಡಾ.ವಿಜಯಸುಂಕದ್​, ಡಾ.ಪ್ರಸಾದ ಪಾಟೀಲ್​ ಇತರರು ಭಾಗಿಯಾಗುವರೆಂದು ಹೇಳಿದರು. ಡಾ. ಶರಣಪ್ಪ ಕಂಬಳಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net