

ಕೊಪ್ಪಳ: ಯುದ್ಧ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆದು ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕು ಎಂದು ಸಿಎಂ ಆರ್ಥಿಕ ಸಲೆಹಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಯುದ್ಧ ಮಾಡುವುದಾದರೆ ಮಾಡಲಿ. ಯುದ್ಧ ಎಂದರೆ ಹುಡಗಾಡಿಕೆ ಅಲ್ಲ. ಅದಕ್ಕೆಲ್ಲ ಪೂರ್ವ ತಯಾರಿ ಬೇಕು. 12 ರಿಂದ 13 ಲಕ್ಷ ಕೋಟಿ ರೂ. ಅವಶ್ಯ. ನಾವೆಲ್ಲ ಒಟ್ಟಾಗಿ ಬೆಂಬಲಿಸೋಣ. ದೇಶದ ರಕ್ಷಣೆ ಪ್ರಶ್ನೆ ಬಂದಾಗ ನಾವೆಲ್ಲರೂ ಒಂದಾಗಬೇಕು. ಮೋದಿ ಮೊದಲು ಕಾಶ್ಮೀರಕ್ಕೆ ತೆರಳಿ ಶಾಂತಿ ಸಭೆ ನಡೆಸಲಿ. ವಿಪಕ್ಷಗಳೊಡನೆ ತೆರಳಿ ಅಲ್ಲಿನ ಜನರಿಗೆ ವಿಶ್ವಾಸ ತುಂಬಬೇಕು. ವಿಪಕ್ಷದವರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಆಪರೇಷನ್ ಸಿಂದೂರು ಸರಿಯಾದ ಕ್ರಮ. ಇದರಲ್ಲಿ ತಪ್ಪೇನಿಲ್ಲ. ನಮ್ಮ ಪಕ್ಷ ಇದನ್ನು ಬೆಂಬಲಿಸಲಿದೆ. ನಾನು ಇದಕ್ಕೆ ಪ್ರತಿಕಾರ ಎನ್ನುವುದಿಲ್ಲ. ಉಗ್ರರ ನೆಲೆ ಪತ್ತೆ ಮಾಡಿ ಅಡಗುದಾಣಗಳ ಮೇಲೆ ದಾಳಿ ಮಾಡಿದ್ದು ಉತ್ತಮ ಕೆಲಸ ಎಂದರು. ಕಾಂಗ್ರೆಸ್ನ ಶಾಂತಿ ಮಂತ್ರದ ಟ್ವೀಟ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಗೊತ್ತಿಲ್ಲವೆಂದರು.