ಹುಲಿಗಿಯಲ್ಲಿ ವಿಶೇಷ ಪೂಜೆ

district koppal operation sindhoor huligi temple pooja
Published on

ಕೊಪ್ಪಳ: ಭಾರತೀಯ ಸೇನೆ ಆಪರೇಷನ್​ ಸಿಂಧೂರ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸರ್ಕಾರ ಆದೇಶಿಸಿದೆ. ಈ ಬೆನ್ನಲ್ಲೇ ಬೆಳಗ್ಗೆ ದೇವಿಗೆ ವಿಶೇಷ ಅಲಂಕಾರ ನೆರವೇರಿಸಲಾಯಿತು. ಭಾರತೀಯ ಸೇನೆ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸೇನಾಪಡೆ ವಿಜಯ ಸಾಧಿಸಿದಕ್ಕೆ ಅಭಿನಂದನ ಪೂರ್ವಕವಾಗಿ ದೇವಿಯಲ್ಲಿ ಬೇಡಿಕೊಳ್ಳಲಾಯಿತು.

ಶತ್ರುಗಳಿಂದ ದೇಶ ರಕ್ಷಣೆ ಮಾಡುವ ಬಲ, ಶಕ್ತಿ ಸೇನಾಪಡೆಗಳಿಗೆ ನೀಡುವಂತೆ ದೇವಿಯಲ್ಲಿ ಮೊರೆ ಇಡಲಾಯಿತು. ಅರ್ಚಕರು ಮಂತ್ರ ಪಠಿಸಿ ಅರ್ಚನೆ ನೆರವೇರಿಸಿದರು. ಶ್ರೀ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಸಿಇಒ ಪ್ರಕಾಶರಾವ್​ ಎಂ.ಎಚ್​. ಪೂಜಾ ಕಾರ್ಯ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net