

ಕೊಪ್ಪಳ: ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಮಂಗಳವಾರ ತಡರಾತ್ರಿ ನಡೆಸಿದ ಆಪರೇಷನ್ ಸಿಂದೂರ ಹೆಸರಿನ ಸೇನಾ ಕಾರ್ಯಾಚರಣೆಗೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾಗ್ಯನರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜನ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದು ಸೇನಾ ಕಾರ್ಯಕ್ಕೆ ಮೆಚ್ಚುಗೆ ಹಾಗೂ ಬೆಂಬಲ ಸೂಚಿಸಿದ್ದಾರೆ.
ಭಾಗ್ಯನರಗದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಭ್ರಮ ಆಚರಿಸಲಾಯಿತು. ಪಪಂ ಸದಸ್ಯರಾದ ಪರಶುರಾಮ ನಾಯಕ, ಜಗದೀಶ ಮಾಲಗಿತ್ತಿ, ಡಾ.ಕೊಟ್ರೇಶ ಶೆಡ್ಮಿ, ಪ್ರಮುಖರಾದ ಸುರೇಶ ಡೊಣ್ಣಿ, ಏಕನಾಥ ಬಾವಿಕಟ್ಟಿ, ಕೊಟ್ರೇಶ್ ಕವಲೂರು, ಸುರೇಶ್ ಪೆದ್ದಿ, ಸುರೇಶ್ ದರಗದಕಟ್ಟಿ, ಜೀತು ಗಾಲ ಪ್ರೇಮನಾಥ, ಗಿರೀಶ ಪಾನಂಟಿ ಇತರರಿದ್ದರು.
ಪಾರಾಯಣ ಇಂದು
ಪಾಕ್ ವಿರುದ್ಧ ಭಾರತ ಸಮರ ಸಾರಿದ್ದು ಉಗ್ರರ ನೆಲೆ ದ್ವಂಸ ಮಾಡಿದೆ. ಈ ಹಿನ್ನೆಲೆಯಲ್ಲಿ ನಗರದ ಶ್ರೀಕೃಷ್ಣ ದೇವಾಲಯದಲ್ಲಿ ವೀರ ಯೋಧರು ಮತ್ತು ದೇಶದ ಒಳಿತಿಗಾಗಿ ಶತ್ರು ಸಂಹಾರ ಯಾಗ ಇಂದು ಸಂಜೆ 6 ರಿಂದ 7ಗಂಟೆವರೆಗೆ ಸಾಮೂಹಿಕ ಶ್ರೀ ಮೃತ್ಯುಂಜಯ ಜಪ ಹಾಗೂ ಶ್ರೀ ಹನುಮಾನ ಚಾಲಿಸ ಜಪ ಪಠಣ ಕಾರ್ಯಕ್ರಮ ನಡೆಯಿತು.