

ವಿ.ಕೆ.ರವೀಂದ್ರ ಕೊಪ್ಪಳ
ಒಂದು ದೇಶ ಒಂದು ಗುರುತಿಗಾಗಿ ಸಾಮಾನ್ಯರಿಗೆ ಆಧಾರ್ ಜಾರಿ ಮಾಡಿರುವ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳಿಗೆ ದೇಶಾದ್ಯಂತ ಒಂದೇ ಮಾದರಿ "ಅಪಾರ' ಕಾರ್ಡ್ ವಿತರಣೆಗೆ ಮುಂದಾಗಿದೆ. ಕಾರ್ಡ್ ವಿತರಣೆಗೆ ಪೋಷಕರಿಂದ ಒಪ್ಪಿಗೆ ಪಡೆವ ಕೆಲಸಕ್ಕೆ ಶಿಕ್ಷಣಾಧಿಕಾರಿಗಳು ಮಾಡುತ್ತಿದ್ದಾರೆ.
ಸಾರ್ವಜನಿಕರ ಎಲ್ಲ ಮಾದರಿ ವ್ಯವಹಾರಕ್ಕೆ ಆಧಾರ್ ಬಳಕೆಯಾಗುತ್ತಿದೆ. ವ್ಯಕ್ತಿ ಗುರುತು, ವಿಳಾಸ ಸೇರಿ ಎಲ್ಲ ವಿವರ ಒಳಗೊಂಡಿದೆ. ಅದರಂತೆ ಮಗುವಿನ ಶೈಕ್ಷಣಿಕ ಬದುಕಿನ ಎಲ್ಲ ವಿವರಗಳನ್ನು ಒಂದೇ ಸೂರಿನಡಿ ತರುವುದು ಯೋಜನೆ ಉದ್ದೇಶ. ಆಧಾರ್ನಂತೆ ಪ್ರತಿ ವಿದ್ಯಾರ್ಥಿಗೆ 12 ಅಂಕಿಗಳ ಅಪಾರ (ಆಟೋಮೆಟೆಡ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರೆಜಿಸ್ಟರಿ) ಗುರುತಿನ ಚೀಟಿ ಸಿಗಲಿದೆ. ರಾಜ್ಯದಲ್ಲಿ ಸದ್ಯ ಶಾಲಾ, ಕಾಲೇಜು ವಿದ್ಯಾರ್ಥಿಗಲಿಗೆ ಸ್ಯಾಟ್ಸ್ (ಸ್ಟೂಡೆಂಟ್ ಅಚೀವ್ಮೆಂಟ್ ಟ್ರಾ$್ಯಕಿಂಗ್ ಸಿಸ್ಟಮ್) ಐಡಿ ನೀಡಲಾಗಿದೆ.
ಇದೇ ಮಾದರಿಯಲ್ಲಿ ದೇಶಾದ್ಯಂತ ಎಲ್ಲ ವಿದ್ಯಾರ್ಥಿಗಳಿಗೆ ಅಪಾರ ಐಡಿ ನೀಡಲು ಕೇಂದ್ರ ಶಿಕ್ಷಣ ಮಂತ್ರಾಲಯ ಯೋಜಿಸಿದೆ. 2020ರ ಹೊಸ ಶಿಕ್ಷಣ ನೀತಿ ಶಿಾರಸ್ಸಿನಂತೆ ಒಂದು ದೇಶ ಒಂದು ವಿದ್ಯಾರ್ಥಿ ಗುರುತು ನೀಡಲು ಮುಂದಾಗಿದೆ. ಮಕ್ಕಳ ಆಧಾರ್ ಕಾರ್ಡ್ ಆಧರಿಸಿ ಅಪಾರ ಐಡಿ ಸೃಷ್ಟಿಯಾಗಲಿದೆ. ಎಲ್ಲ ದಾಖಲೆಗಳ ಡಿಜಿಟಲೀಕರಣವಾಗಲಿದೆ. ರಾಜ್ಯದ ಸರ್ಕಾರಿ, ಅನುದಾನಿತ, ಖಾಸಗಿ 75,960 ಶಾಲೆಗಳ, 1.4 ಕೋಟಿಗೂ ಅಧಿಕ ಮಕ್ಕಳಿಗೆ ಕಾರ್ಡ್ ದೊರೆಯಲಿದೆ.
ಶೈಕ್ಷಣಿಕ ದಾಖಲೆಗಳಾದ ಟಿಸಿ, ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳು, ಕ್ರೀಡಾ ಸಾಧನೆ, ಕೌಶಲ ತರಬೇತಿಗಳ ವಿವರ, ಇತರ ಕ್ಷೇತ್ರದಲ್ಲೂ ಮಾಡಿದ ಸಾಧನೆಗಳ ಮಾಹಿತಿಯನ್ನು ಅಪಾರ ಕಾರ್ಡ್ ಒಳಗೊಲ್ಳಲಿದೆ. ಸರ್ಕಾರ ಮಾಹಿತಿ ಗೌಪ್ಯವಾಗಿಡುವ ಅಭಯ ನೀಡಿದ್ದು, ಪೋಷಕರ ಒಪ್ಪಿಗೆ ಕಡ್ಡಾಯ. ಶಾಲಾ ಮುಖ್ಯಸ್ಥರು ಯೋಜನೆ ಬಗ್ಗೆ ತಿಳಿಸಿ ಅವರಿಂದ ಲಿಖಿತ ಒಪ್ಪಿಗೆ ಪಡೆಯಬೇಕು. ನವೆಂಬರ್ನಿಂದಲೇ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಒಪ್ಪಿಗೆ ನೀಡಿದ ಮಕ್ಕಳಿಗೆ ಶ್ರೀ ಕಾರ್ಡ್ ಕೈ ಸೇರಲಿದೆ.
ದಾಖಲೆಗಳ ಕೇಂದ್ರೀಕರಣ
ಅಪಾರ ಕಾರ್ಡ್ನಿಂದ ಸಾಕಷ್ಟು ಲಾಭಗಳಾಗಲಿವೆ. ಎಲ್ಲ ದಾಖಲೆಗಳು ಒಂದೇ ಕಾರ್ಡ್ನಲ್ಲಿ ಶೇಖರಗೊಳ್ಳಲಿವೆ. ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ದಾಖಲೆ ನಿರ್ವಹಣೆ ಹೊರೆ ತಪ್ಪಿಲಿದೆ. ಶಿಕ್ಷಣ, ತರಬೇತಿ, ಸಾಧನೆ ವಿವರಗಳು ತಕ್ಷಣಕ್ಕೆ ಲಭ್ಯವಾಗಲಿದ್ದು, ಸರ್ಕಾರಕ್ಕೂ ಸಾಕ್ಷರತೆ, ವಿದ್ಯಾರ್ಥಿ ಶೈಕ್ಷಣಿಕ ವಿವರದ ನಿಖರ ಅಂಕಿ ಅಂಶ ಕೈ ಸೇರಲಿದೆ. ಯಾವ ಶಿಕ್ಷಣ, ತರಬೇತಿ, ಸಾಧನೆಗೈದವರು, ಪರಿಣಿತರ ವಿವರ ದಾಖಲಾಗಲಿದೆ. ಉದ್ಯೋಗ, ಶಿಕ್ಷಣ ಗುಣಮಟ್ಟ, ಕೌಶಲ ತರಬೇತಿ ಯೋಜನೆ ರೂಪಿಸಲು ಅನುಕೂಲವಾಗಲಿದೆ.