ಕೊಪ್ಪಳ: ಎಲೆಕ್ಟ್ರಿಕ್ ಬೈಕ್ ನೀಡಲು ಸೇವಾ ನೂನ್ಯತೆ ಎಸಗಿದ ಓಲಾ ಎಲೆಕ್ಟಿಕ್ ವಾಹನ ಮಾರಾಟಗಾರರಿಗೆ ದಂಡ ವಿಧಿಸಿ ಜಿಲಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಗಂಗಾವತಿಯ ಶ್ರೀಕಾಂತ ತಂದೆ ಬಸವನಗೌಡ ಎಂಬುವವರು ಗಂಗಾವತಿಯ ರಾಯಚೂರು ರಸ್ತೆಯ ಪ್ರಶಾಂತ ನಗರದಲ್ಲಿರುವ ಓಲಾ ಎಲೆಕ್ಟಿಕ್ ವಾಹನ ಮಾರಾಟಗಾರರಿಂದ ಓಲಾ ಎಲೆಕ್ರಿಕ್ ವಾಹನ ಖರೀದಿಸಿದ್ದಾರೆ. 2024ರ ಜೂನ್ 23ರಂದು 19,499ರೂ. ಮುಂಗಡ ನೀಡಿದ್ದಾರೆ. ಐಡಿಎ್ಸಿ ಸ್ಟ್ ಬ್ಯಾಂಕ್ನಲ್ಲಿ 85 ಸಾವಿರ ರೂ. ಸಾಲ ಮಾಡಿ ನೀಡಿದ್ದು, ವಾಹನ ನೋಂದಣಿಗೆ 8,519ರೂ., ಕಾಯ್ದಿರಿಸಲು 2 ಸಾವಿರ ರೂ. ಪಾವತಿಸಿದ್ದಾರೆ. 2024ರ ಜುಲೈ 5ರಂದು ವಾಹನ ನೋಂದಣಿಗೆ ಕಳಿಸಿದ್ದಾಗಿ ಕಂಪನಿ ತಿಳಿಸಿದೆ. 2024ರ ಜುಲೈ 26ರಂದು ಕೆಎ37, ಇಎಸ್2399 ನೋಂದಣಿ ಸಂಖ್ಯೆ ನೀಡಲಾಗಿದೆ. ಆದರೆ, ಬೈಕ್ ನೀಡಿಲ್ಲ.
ಎಲ್ಲ ಹಣ ಕಟ್ಟಿಸಿಕೊಂಡರೂ ಬೈಕ್ ನೀಡದ್ದನ್ನು ಖಂಡಿಸಿ ಶ್ರೀಕಾಂತ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗ ಎದುರಾದರರಿಗೆ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಇನ್ನೋರ್ವ ಎದುರಾರ ವಕೀಲರ ಮೂಲಕವೇ ಉತ್ತರ ಕೊಡಿಸಿದ್ದಾರೆ. ವಿಚಾರಣೆಗೆ ಹಾಜರಾಗದೆ ಸರಿಯಾದ ಪ್ರತಿವಾದ ಮಂಡಿಸಿಲ್ಲ. ಎಲ್ಲವನ್ನೂ ಪರಿಶೀಲಿಸಿದ ಆಯೋಗ ಅಧ್ಯಕ್ಷ ಜಿ.ಇ.ಸೌಭಾಗ್ಯಲಕ್ಷಿ$್ಮ, ಸದಸ್ಯರಾಜು ಎನ್.ಮೇತ್ರಿ ಪ್ರತಿವಾದಿಗಳು ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿದ್ದಾರೆಂದು ತಿಳಿಸಿದ್ದಾರೆ. ಬೈಕ್ ಖರೀದಿ ಮೊತ್ತ 1,10,680 ರೂ. ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ. 6ರ ಬಡ್ಡಿ ಸಹಿತ ಹಾಗೂ ಮಾನಸಿಕ ಯಾತನೆಗೆ 10,000 ರೂ., ದೂರಿನ ಖರ್ಚು 5,000ರೂ. 45ದಿನದೊಳಗೆ ಪಾವತಿಸುವಂತೆ ಕಂಪನಿಗೆ ಆದೇಶಿಸಿದ್ದಾರೆ. ಬೈಕ್ ನೋಂದಣಿ ದಾಖಲೆಗಳನ್ನು ದೂರುದಾರನಿಗೆ ನೀಡಲು ಸೂಚಿಸಿದ್ದಾರೆ.