ಆತ್ಮಹತ್ಯೆಗೆ ಯತ್ನಿಸಿದ ನರ್ಸಿಂಗ್​ ಆಫೀಸರ್​

Published on

ಕೊಪ್ಪಳ: ಮೇಲಧಿಕಾರಿಗಳು ಹಾಗೂ ಸಹದ್ಯೋಗಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾಸ್ಪತ್ರೆ ನರ್ಸಿಂಗ್​ ಆಫೀಸರ್​ ಸೋಮವಾರ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶಶಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದಾತ. ಕೆಲ ವರ್ಷದಿಂದ ಡಿಎಸ್​ ಸೇರಿ ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಸಹದ್ಯೋಗಿಗಳು ಕಾಟ ಹೆಚ್ಚಾಗಿದೆ. ಇತ್ತೀಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂದ ಚುನಾವಣೆಯಲ್ಲೂ ಸ್ಪರ್ಧಿಸಿದ್ದೆ. ಆಗಲೂ ಒತ್ತಡ ಹೇರಿ ನನ್ನ ನಾಮಪತ್ರ ವಾಪಸ್​ ತೆಗೆಸಿದ್ದಾರೆ. ಚುನಾವಣೆ ವಿಷಯದಲ್ಲೂ ಮಾನಸಿಕ ಹಿಂಸೆ ನೀಡಿದ್ದಾರೆ. ಮನನೊಂದಿದ್ದು ಸಾಕಾಗಿದೆ. ಅದಕ್ಕೆ 20ಕ್ಕು ಹೆಚ್ಚು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವೆ. ನಾನು ಸತ್ತ ಮೇಲಾದರೂ ನ್ಯಾಯ ದೊರೆಯಲಿ ಎಂದು ಆಸ್ಪತ್ರೆ ಮುಂಭಾಗದಲ್ಲಿ ಅಳಲು ತೋಡಿಕೊಂಡಿದ್ದಾನೆ. ಬಳಿಕ ಸಹದ್ಯೋಗಿಗಳು, ಸಾರ್ವಜನಿಕರು ಒತ್ತಾಯ ಮಾಡಿ ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗಿದ್ದಾರೆ. ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net