

ಕೊಪ್ಪಳ: ಬೌದ್ಧಿಕತೆ ಜತೆಗೆ ಶ್ರಮದಾನ ಕೂಡ ಬಹಳ ಮುಖ್ಯ ಎಂದು ಸಾಹಿತಿ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶ್ರಮದಾನದಿಂದ ದೇಹಕ್ಕೆ ಒಳ್ಳೆಯದು. ಶ್ರಮ ಜೀವನ ನಮ್ಮದಾಗಿರಬೇಕು. ನಮ್ಮ ದೇಶ ವಿವಿಧತೆ, ಆಹಾರ ಪದ್ಧತಿ, ಸಂಸತಿ, ಭಾಷೆ ಹೊಂದಿದೆ. ಕನ್ನಡ ಭಾಷೆ ಪ್ರಾಚಿನವಾದದ್ದು. ಕವಿರಾಜ ಮಾರ್ಗದಿಂದ ಪಂಪ, ರನ್ನ, ಲಕ್ಷಿ$್ಮಶ, ಚಾಮರಸ ಇವರೆಲ್ಲರೂ ನಮ್ಮ ಉತ್ತರ ಕರ್ನಾಟಕದವರು. ಗಂಡುಗಲಿ ಕುಮಾರ ರಾಮ ಈ ಭಾಗದವರು. ನಮ್ಮ ಭಾಗಕ್ಕೆ ಒಳ್ಳೆಯ ಸಾಂಸತಿಕ ಶ್ರೀಮಂತಿಕೆಯಿದೆ. ಬಸವಣ್ಣಅವರ ಅನುಭವ ಮಂಟಪ ಇಂದಿನ ಸಂಸತ್ತಾಗಿದೆ. ಹಳ್ಳಿಗಳ ಅಭಿವದ್ಧಿಗೆ ಶ್ರಮಿಸಬೇಕು. ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಎಂದರು.
ಶಿಕ್ಷಣ ತಜ್ಞ ಬಿ.ಜಿ.ಕರಿಗಾರ ಮಾತನಾಡಿ, ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ನಾವು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಬೇಕು. ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು. ಸ್ವಚ್ಛತಾ ಕಾರ್ಯ ದೇಶ ಸೇವೆಯಲ್ಲಿ ಯುವಕರು ತೊಡಗಬೇಕೆಂದು ಸಲಹೆ ನೀಡಿದರು.
ಲೇಬಗೇರಿ ಗ್ರಾಪಂ ಸದಸ್ಯ ಕೀರಗೌಡ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಲ್ಪಿಗಳನ್ನಾಗಿ ಮಾಡುತ್ತಾರೆ. ನಿಮ್ಮ ಪಾಲಕರ ಕಷ್ಟ ಅರಿತು ಅಭ್ಯಾಸ ಮಾಡಿ. ಉತ್ತಮ ಆಲೋಚನೆ ಅಳವಡಿಸಿಕೊಳ್ಳಿ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದರು.
ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಮಾತನಾಡಿದರು. ವಿಜಯಲಕ್ಷಿ$್ಮ, ಹಂಪಮ್ಮ, ಗ್ರಾಪಂ ಸದ್ಯರು ಇದ್ದರು.