ಬಾಕಿ ವೇತನ ಪಾವತಿಸಿ

district koppal nrega workers protest
Published on

ಕೊಪ್ಪಳ: ಸೇವಾ ಭದ್ರತೆ, ಆರೋಗ್ಯ ವಿಮೆ ಹಾಗೂ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ನಗರದ ತಾಪಂ ಕಚೇರಿ ಮುಂದೆ ನರೇಗಾ ೆಮಾಭಿವೃದ್ಧಿ ನೌಕರರ ಸಂದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಪಂ, ತಾಪಂ ಹಾಗೂ ಗ್ರಾಪಂ ಹಂತದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ರಾಜ್ಯಾದ್ಯಂತ 5 ಸಾವಿರ ನೌಕರರಿದ್ದು, ಕಳೆದ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬದ ಸದಸ್ಯರ ವೈದ್ಯಕಿಯ ವೆಚ್ಚಗಳು, ಪ್ರಯಾಣ ವೆಚ್ಚಗಳು, ಸಾಲಗಳ ಮರುಪಾವತಿ, ಇ.ಎಂ.ಐ. ಸೇರಿ ಅನೇಕ ರೀತಿಯ ಖರ್ಚುವೆಚ್ಚಗಳನ್ನು ನಿಭಾಯಿಸಲು ತೀವ್ರ ತೊಂದರೆಯುಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಜು.7ರಿಂದ ರಾಜ್ಯಾದ್ಯಂತ ಅಸಹಕಾರ ಚಳವಳಿ ಆರಂಭಿಸಿದ್ದೇವೆ. ಸರ್ಕಾರ ತಕ್ಷಣ ಬಾಕಿ ವೇತನ ಬಿಡುಗಡೆ ಮಾಡಬೇಕು. ಸೇವಾ ಭದ್ರತೆ ಒದಗಿಸಬೇಕು. ಆರೋಗ್ಯ ವಿಮೆ ಸೇರಿ ಇತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಕ್ಷೇಮಾಭಿವೃದ್ಧಿ ಸಂದ ಜಿಲ್ಲಾಧ್ಯಕ್ಷ ಕೊಟ್ರೇಶ ಜವಳಿ, ಉಪಾಧ್ಯಕ್ಷ ಶರಣಯ್ಯ, ಪ್ರಮುಖರಾದ ಕನಕಪ್ಪ ಛಲವಾದಿ, ವೀಣಾ ಅಂಗಡಿ, ಬಾಳಪ್ಪ ತಾಳಕೇರಿ, ಸರಸ್ವತಿ, ಯಮನೂರಪ್ಪ, ವಿನಯಕುಮಾರ್​, ವಿಶ್ವನಾಥ ಜಿನ್ನೂರ, ಸಯ್ಯದ್​ ತನ್ವೀರ್​, ರಮೇಶ, ಹುಸೇನಪಾಷಾ, ವಿಜಯ್​, ಶರಣಬಸವ ಮಾಲಿ ಪಾಟೀಲ್​, ಸಂತೋಷ ನಂದಾಪುರ, ಪ್ರಕಾಶ ಸಜ್ಜನ್​, ಬಸವರಾಜ ತೋಟದ್​, ಮಹೇಶ ಸೂಡಿ, ವಿಜಯಲಕ್ಷಿ$್ಮ, ಬೇರ್​ ಫೂಟ್​ ಟೆಕ್ನಿಷಿಯನ್​ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ, ರವಿಶಂಕರ್​, ಮಂಜುನಾಥ, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net