ನರೇಗಾದಡಿ ಕೆಲಸ ಖಾತ್ರಿ

district koppal nrega workers day celebration
Published on

ಕೊಪ್ಪಳ: ನರೇಗಾ ಯೋಜನೆ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಿದೆ ಎಂದು ಕಾಯಕ ಬಂಧು ಶಿವಾನಂದ ಬೆಣಕಲ್​ ಹೇಳಿದರು.

ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕೊಂದಿಗೆ ಕಾರ್ಮಿಕ ದಿನ ಆಚರಿಸಿ ಮಾತನಾಡಿದರು.

ಅಸಂಘಟಿತರಾಗಿರುವ ನರೇಗಾ ಕೂಲಿಕಾರರು ನಿತ್ಯ ವಿಭಿನ್ನ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಾರೆ. ಗ್ರಾಮಸ್ಥರೆಲ್ಲ ಒಂದೆಡೆ ಸೇರುವುದರಿಂದ ಗ್ರಾಮೀಣ ಸೊಗಡು ಕಾಣಬಹುದು. ನರೇಗಾದಿಂದ ಆರ್ಥಿಕ ಭದ್ರತೆ ಜತೆಗೆ ಸಾಮಾಜಿಕವಾಗಿ ಪರಸ್ಪರರು ಕೂಡುವಂತಾಗಿದೆ. ಯೋಜನೆಯಡಿ ಕೂಲಿ ಕೆಲಸ ಪಡೆದು ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಗುಳೆ ತಪ್ಪಿಸಲು ಸರ್ಕಾರ ನರೇಗಾ ಜಾರಿ ಮಾಡಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನ ಕೆಲಸ ಖಾತ್ರಿ ನೀಡಲಾಗುವುದು. ಈ ವರ್ಷ ಕೂಲಿ ಮೊತ್ತ 370ರೂ.ಗೆ ಹೆಚ್ಚಿಸಲಾಗಿದೆ. ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ತೊಡಗಿಕೊಳ್ಳಲು ಅವಕಾಶವಿದೆ ಎಂದರು.

ಕಾಯಕ ಬಂಧು ಶಾಂತಮ್ಮ ರೊಟ್ಟಿ, ನೀರಗಂಟಿ ದೇವರಾಜ ಅಳವಂಡಿ, ಮರಿಶಾಂತವೀರ ಅಂಗಡಿ, ನರೇಗಾ ಕಾರ್ಮಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net