ಕೊಪ್ಪಳದಲ್ಲಿ ಹೊಸ ವರ್ಷ ಅಂಗವಾಗಿ ಕೇಕ್‌ನಲ್ಲಿ ಅರಳಿದ ಪುನೀತ್, ಛೋಟಾ ಭೀಮ್

DISTRICT KOPPAL NEW YEAR CELEBRATION KOPPAL CAKE PUNEET CHOTA BHEEM
NEW YEAR CELEBRATION KOPPAL CAKE PUNEET CHOTA BHEEM
ಕೊಪ್ಪಳದಲ್ಲಿ ಹೊಸ ವರ್ಷ ಅಂಗವಾಗಿ ಕೇಕ್‌ನಲ್ಲಿ ಅರಳಿದ ಪುನೀತ್, ಛೋಟಾ ಭೀಮ್
Published on

ಕೊಪ್ಪಳ: ಕ್ಯಾಲೆಂಡರ್​ ವರ್ಷ ಕಳೆದ ನವ ವಸಂತಕ್ಕೆ ಕಾಲಿಡುತ್ತಿದ್ದು, ಭಾನುವಾರ ವರ್ಷಾಚರಣೆ ಸಂಭ್ರಮ ಕಂಡುಬಂತು. ಯುವ ಜನರ ಹಾದಿಯಾಗಿ ಎಲ್ಲರೂ ಬಗೆ ಬಗೆ ಕೇಕ್​ ಕೊಂಡೊಯ್ಯುದ್ದು ತಡರಾತ್ರಿ ಹೊಸ ವರ್ಷಕ್ಕೆ ಸ್ವಾಗತ ಕೋರಿದರು.


ಬೆಳಗ್ಗೆ ತೆರೆದಿದ್ದ ಅಂಗಡಿ ಮುಂಗಟ್ಟೆಗಳು ಸಂಜೆಯಾಗುತ್ತಲೇ ಬಂದ್​ ಆಗಿದ್ದವು. ಭಾನುವಾರ ಕಾರಣ ಶಾಲಾ&ಕಾಲೇಜುಗಳು ರಜೆ ಇದ್ದು, ವಿದ್ಯಾರ್ಥಿಗಳು, ಸರ್ಕಾರಿ ನೌಕರರಿಗೂ ವರ್ಷಾಚರೆಣೆಗೆ ಅನುಕೂಲ ಕಲ್ಪಸಿದಂತಾಯಿತು. ಬೆಳಗ್ಗೆಯಿಂದಲೇ ಬೇಕರಿಗಳು ಜನ ಜಂಗುಳಿಯಿಂದ ಕೂಡಿದ್ದವು.

ಅರ್ಧ ಕೆಜಿ ಕೇಕ್​ನಿಂದ ಹಿಡಿದು 5, 10 ಕೆಜಿವರೆಗೆ ಬೃಹತ್​ ಕೇಕ್​ಗಳನ್ನು ಕೆಲವರು ಕೊಂಡೊಯ್ದರು. ಕೆಲವರು ಅಂಗಡಿಗಳನ್ನು ಸಿಂಗಾರ ಮಾಡಿ, ವಿದ್ಯುತ್​ ದೀಪಗಳಿಂದ ಅಲಂಕರಿಸಿ ವಿಶೇಷ ವಿನ್ಯಾಸ ಮಾಡಿದ್ದರು. ಹೊಸ ವರ್ಷಕ್ಕೆ ಸ್ವಾಗತ ಕೋರುವ ನಾಮಲಕಗಳು, ಹ್ಯಾಪಿ ನ್ಯೂ ಇಯರ್​ ಎಂಬ ಬೋರ್ಡ್​ಗಳನ್ನು ಹಾಕಲಾಯಿತು.


ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ನಗರದ ಬಸ್​ ನಿಲ್ದಾಣ, ಅಶೋಕ ವೃತ್ತ, ಗಡಿಯಾರ ಕಂಬ, ಬಸವೇಶ್ವರ ವೃತ್ತ ಸೇರಿ ಜವಾಹರ ರಸ್ತೆ, ನಗರದ ಜೆ.ಎಚ್​.ಪಟೇಲ್​ ಮುಖ್ಯ ರಸ್ತೆ ಸೇರಿ ಇತರೆಡೆ ಪೊಲೀಸ್​ ಭದ್ರತೆ ಕಲ್ಪಿಸಲಾಯಿತು.

ಜಿಲ್ಲಾಡಳಿತವೂ ಯಾವುದೇ ಅಹಿತಕರ ಟನೆ ನಡೆಯದಂತೆ ಮುಂಜಾಗ್ರತವಹಿಸಲು ಅಧಿಕಾರಿಗಳಿಗೆ ಸೂಚಿಸಿದೆ. ಸೂಕ್ಷ$್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವಂತೆ ತಿಳಿಸಿದ್ದು, ಬಿಗಿ ಬಂದೋಬಸ್ತ್​ ಕಲ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net