

ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬೃಹತ್ ಉಕ್ಕು ಉತ್ಪಾದನಾ ಕಾರ್ಖಾನೆ ನಿರ್ಮಿಸುವುದ ಬೇಡವೆಂದು ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ಶುಕ್ರವಾರ ಡಿಸಿ ನಲಿನ್ ಅತುಲ್ಗೆ ಮನವಿ ಸಲ್ಲಿಸಿದರು.
ಈಗಾಗಲೇ ಕೊಪ್ಪಳದಲ್ಲಿ ಸಾಕಷ್ಟು ಕಾರ್ಖಾನೆಗಳು ಉಗುಳುತ್ತಿರುವ ಧೂಳಿನಿಂದ ಜನರ ಆರೋಗ್ಯ ಹಾಳಾಗುತ್ತಿದೆ. ದೊಡ್ಡ ಕಾರ್ಖಾನೆ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದ್ದು ದುರದೃಷ್ಟಕರ. ಇದರಿಂದ ಜನರ ಆರೋಗ್ಯ ಸಮಸ್ಯೆ ಹೆಚ್ಚಲಿದೆ. ಪರಿಸರದ ಮೇಲೆ ಹಾನಿಯಾಗುವುದು. ಕೃಷಿ ಚಟುವಟಿಕೆಗಳ ಮೇಲೂ ಅಡ್ಡ ಪರಿಣಾಮವಾಗಲಿದೆ ಎಂದು ದೂರಿದರು.
ಪರಿಸರ ಅಧಿಕಾರಿಗಳು ನಿಯಮ ಮೀರಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣ ಕಾರ್ಖಾನೆ ವಿಸ್ತರಣೆ ಅನುಮತಿ ರದ್ದುಪಡಿಸಬೇಕು. ಜನರ ಆರೋಗ್ಯ ರಸಬೇಕು. ನಿಯಮ ಮೀರಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಟನೆ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು, ಜಿ.ಎಸ್.ಗೋನಾಳ, ಮುದಿಯಪ್ಪ ಗೊಂದಿಹೊಸಳ್ಳಿ, ಶಂಕರ ಮೇಟಿ, ದೇವೇಂದ್ರಪ್ಪ ತೊಂಡಿಹಾಳ, ಈರಪ್ಪ ಡೊಳ್ಳಿನ, ಶಶಿಕುಮಾರ ಹುಬ್ಬಳ್ಳಿ, ರಫಿ ಇತರರಿದ್ದರು.