

ಕೊಪ್ಪಳ: ರಾಷ್ಟ್ರೀಯ ಏಕತಾ ದಿನ ಅಂಗವಾಗಿ ಗುರುವಾರ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಮಾಜಿ ಉಪ ಪ್ರಧಾನಿ ದಿ.ಸರ್ದಾರ ವಲ್ಲಭಬಾಯ್ ಪಟೇಲ್ ಜನ್ಮ ದಿನ ಅಂಗವಾಗಿ ಪ್ರತಿ ವರ್ಷ ಅ.31ರಂದು ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಿದ್ರಾಮೇಶ್ವರ ನೇತೃತ್ವದಲ್ಲಿ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಪ್ರತಿಜ್ಞೆ ಬೋಧಿಸಿದರು.
ಡಿಡಿಪಿಯು ಜಗದೀಶ ಎಚ್., ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ತಹಶಿಲ್ದಾರ ವಿನಾಯಕ, ಜಿಲ್ಲಾಧಿಕಾರಿ ಕಚೇರಿಯ ಆಡಿಟ್ ಅಧಿಕಾರಿ ಹರೀಶ್, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೆದಾರ ಶಿವಪುತ್ರಪ್ಪ ವಟಗಲ್ ಇತರರಿದ್ದರು.