ಸಾರ್ವಜನಿಕರು ಅದಾಲತ್​ ಲಾಭ ಪಡೆಯಿರಿ

district koppal national loka adalat judge press meet
Published on

ಕೊಪ್ಪಳ: ಜಿಲ್ಲೆಯ ಜನರು ಬರುವ ಡಿ.14ರಂದು ನಡೆವ ರಾಷ್ಟ್ರೀಯ ಲೋಕ ಅದಾಲತ್​ ಲಾಭ ಪಡೆಯಬೇಕೆಂದು ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​.ದರಗದ ತಿಳಿಸಿದರು.

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಅದಾಲತ್​ನಲ್ಲಿ ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಸಿವಿಲ್​ ಪ್ರಕರಣಗಳಾಗಿದ್ದಲ್ಲಿ ನ್ಯಾಯಾಲಯ ಶುಲ್ಕ ಕಟ್ಟುವುದು ತಪ್ಪಲಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಜನರು ನ್ಯಾಯಾಲಯಗಳಿಗೆ ಅಲೆಯುವುದು ತಪ್ಪಲಿದೆ. ಕೌಟುಂಬಿಕ ಸಮಸ್ಯೆ, ಸಿವಿಲ್​, ಭೂ ವಿವಾದ, ಬ್ಯಾಂಕಿಂಗ್​ ಸೇರಿ ಇತರ ಹಲವು ಪ್ರಕರಣಗಳನ್ನು ಅದಾಲತ್​ನಲ್ಲಿ ಪರಿಹರಿಸಿಕೊಳ್ಳಬಹುದು. ಸಂಧಾನ ಮೂಲಕ ಪ್ರಕರಣ ಪರಿಹಾರವಾಗುವುದರಿಂದ ಸಮಯ ಉಳಿಯಲಿದೆ. ಸಾಮಾನ್ಯ ಜನರು, ದಿನಗೂಲಿ ನೌಕರರಿಗೆ ಸಾಕಷ್ಟು ಲಾಭವಾಗಲಿದೆ ಎಂದರು.

ಸದ್ಯ 34,420 ಪ್ರಕರಣಗಳು ಬಾಕಿ ಇವೆ. 1,489 ಪ್ರಕರಣಗಳು ರಾಜೀ ಸಂಧಾನಕ್ಕೆ ರೆರ್​ ಆಗಿವೆ. ಕಳೆದ ಅದಾಲತ್​ನಲ್ಲಿ 14 ದಂಪತಿ ಒಂದಾಗಿದ್ದಾರೆ. ಡಿ.14ರಂದು ನಡೆವ ಅದಾಲತ್​ನಲ್ಲಿ ಕೊಪ್ಪಳ, ಕುಷ್ಟಗಿ, ಗಂಗಾವತಿ, ಯಲಬುರ್ಗಾ ನ್ಯಾಯಾಲಯಗಳಲ್ಲಿನ ವಿವಿಧ ರಾಜೀ ಆಗುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ. ಜನರು ಇದರ ಸದುಪಯೋಗ ಪಡೆಯಬೇಕು. ವಕೀಲರು ಈ ಬಗ್ಗೆ ಕದಾರರಿಗೆ ಸಲಹೆ ನೀಡಬೇಕು ಎಂದು ವಿವರಿಸಿದರು.

ನ್ಯಾಯಾಧೀಶರಾದ ಮಲಕಾರಿ ರಾಮಪ್ಪ ಒಡೆಯರ್​, ಭಾಗ್ಯಲಕ್ಷಿ$್ಮ, ಆದಿತ್ಯ ಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net