ಶಾಂತಲಿಂಗೇಶ್ವರ ರಥೋತ್ಸವ ಅದ್ದೂರಿ

Nagaragaddi math rathotsava in koppal taluku district
ಕೊಪ್ಪಳ ತಾಲೂಕಿನ ನಗರಗಡ್ಡಿ ಮಠದಲ್ಲಿ ಸೋಮವಾರ ಜಾತ್ರೆ ಅಂಗವಾಗಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಮೈನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ, ಕನಕಗಿರಿ ಡಾ.ಚನ್ನಮಲ್ಲ ಸ್ವಾಮೀಜಿ, ಕಂಪ್ಲಿಯ ಶ್ರೀ ಅಭಿನವ ಪ್ರಭು ಮಹಾಸ್ವಾಮಿ, ಕುಕನೂರಿನ ಡಾ.ಮಹಾದೇವ ಮಹಾಸ್ವಾಮಿ ಇದ್ದರು.
Published on

ಕೊಪ್ಪಳ: ತಾಲೂಕಿನ ಮಹಮ್ಮದ ನಗರ ಸಮೀಪದ ನಗರಗಡ್ಡಿ ಮಠದಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿದವು.

ಮೈನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಾತನಾಡಿ, ಹಸಿರೆ ನಮ್ಮ ಉಸಿರು. ಎಲ್ಲರು ಪರಿಸರ ಉಳಿಸುವ ಕೆಲಸ ಮಾಡಿ. ಸಾವಯವ ಕೃಷಿಯತ್ತ ರೈತರು ಮುಖ ಮಾಡಬೇಕು. ವಿಷಮುಕ್ತ ಆಹಾರ ಬೆಳೆಯಬೇಕು. ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಿದ್ದು ಉತ್ತಮ ಕೆಲಸ ಎಂದರು.

ಕನಕಗಿರಿ ಡಾ.ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ದುಡಿಯುವುದು ಉತ್ತಮ ಜೀವನ ಕಳೆಯಲು. ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ. ಪ್ರಕೃತಿಗೆ ಪೂರಕವಾಗಿ ಬದುಕಬೇಕು. ಹೆಸರು ಬರಲೆಂದು ದಾನ ಮಾಡಬೇಡಿ. ತೆರೆಮರೆಯಲ್ಲಿ ಮಾಡಿ. ಆದರ್ಶ ಇಟ್ಟುಕೊಂಡು ಬದುಕಬೇಕು. ರೈತರಿಲ್ಲದೇ ಜಗತ್ತು ಮುಂದುವರಿಯುವುದಿಲ್ಲ. ಮಕ್ಕಳಿಗೆ ದುಡಿಯುವುದನ್ನು ಕಲಿಸಿ ಎಂದು ಸಲಹೆ ನೀಡಿದರು.

ಹರಗಿನಡೋಣಿ ಶ್ರೀಗಳು, ಕೃಷಿ ಸಾಧಕಿ ಅನ್ನಪೂರ್ಣ ಶ್ರೀನಿವಾಸ ಮಾತನಾಡಿದರು. ಕಂಪ್ಲಿಯ ಶ್ರೀ ಅಭಿನವ ಪ್ರಭು ಮಹಾಸ್ವಾಮಿ, ಕುಕನೂರಿನ ಡಾ.ಮಹಾದೇವ ಮಹಾಸ್ವಾಮಿ, ಸಂತೆಕಲ್ಲೂರ ಶ್ರೀ ಮಹಾಂತ ಶಿವಾಚಾರ್ಯ ಸಾನ್ನಿಧ್ಯವಹಿಸಿದ್ದರು.

ಕಲಾವಿದರಾದ ಕೃಷ್ಣಾನಂದ, ಶೃತಿ ಹ್ಯಾಟಿ, ಮಿಮಿಕ್ರಿ ಗೋಪಿ, ಗುಂಡಣ್ಣ ಡಿಗ್ಗಿ, ಜೀವನಸಾಬ ಬಿನ್ನಾಳ ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅಗಳಕೇರಿ ಶತಾಯುಷಿ ಕಲ್ಲಮ್ಮ ವೀರಬಸಯ್ಯ, ಬಸಮ್ಮ ಮಡಿವಾಳಯ್ಯ, ರಾಜೊತ್ಸವ ಪ್ರಶಸ್ತಿ ಪುರಸತೆ ಹುಚ್ಚಮ್ಮ ಚೌದ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net