ಮುಸ್ಟೂರ ಗ್ರಾಪಂಗೆ ಸೂರ್ಯರಾವ್ ಅಧ್ಯಕ್ಷ, ನಿಂಗಮ್ಮ ಉಪಾಧ್ಯಕ್ಷೆ

Mustur GP President, vice president election held suryarao elect ad a president kartatagi
ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಪಂಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸುರೇಶ ಬಿ.ಸೂರ್ಯರಾವ್‌, ಉಪಾಧ್ಯಕ್ಷೆ ನಿಂಗಮ್ಮ ಸಣ್ಣಬಸಪ್ಪ ಮಡಿವಾಳರನ್ನು ಸದಸ್ಯರು ಮಂಗಳವಾರ ಸನ್ಮಾನಿಸಿದರು.
Published on

ಕಾರಟಗಿ (ಕೊಪ್ಪಳ):ತಾಲೂಕಿನ ಮುಸ್ಟೂರು ಗ್ರಾಪಂಗೆ ಎರಡನೇ ಅವಧಿಗೆ ಸುರೇಶ ಬಿ.ಸೂರ್ಯರಾವ್‌ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಂಗಮ್ಮ ಸಣ್ಣಬಸಪ್ಪ ಮಡಿವಾಳ ಮಂಗಳವಾರ ಜಯಗಳಿಸಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಬಿ.ಸೂರ್ಯರಾವ್‌ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಿಂಗಮ್ಮ ಸಣ್ಣಬಸಪ್ಪ ಮಡಿವಾಳ ಮತ್ತು ಕಾವ್ಯ ಮಹೇಶ ನಾಮಪತ್ರ ಸಲ್ಲಿಸಿದ್ದರು.

ನಿಂಗಮ್ಮ ಸಣ್ಣಬಸಪ್ಪ ಮಡಿವಾಳ 8ಮತಗಳ ಅಂತರದಿಂದ ಕಾವ್ಯ ಮಹೇಶ ವಿರುದ್ಧ ಜಯಗಳಿಸಿದರು. ಒಟ್ಟು 13ಜನ ಸದಸ್ಯರನ್ನು ಹೊಂದಿರುವ ಗ್ರಾಪಂನಲ್ಲಿ 11ಜನರು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮತ ಚಲಾಯಿಸಿದರು. ಇಬ್ಬರು ಸದಸ್ಯರು ಗೈರಾಗಿದ್ದರು ಎಂದು ಚುನಾವಣಾಧಿಕಾರಿ ಹಾಗೂ ತಾಪಂ ಸಹಾಯಕ ನಿರ್ದೇಶಕಿ ವೈ.ವನಜಾ ತಿಳಿಸಿದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಸದಸ್ಯರು ಸನ್ಮಾನಿಸಿದರು. ಈ ವೇಳೆ ಗ್ರಾಪಂ ಪಿಡಿಒ ಸಾಯಿನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net