ಉಚಿತ ಖತ್ನಾ ಶಿಬಿರ 20ಕ್ಕೆ

Published on

ಕೊಪ್ಪಳ: ಹಜರತ್​ ಸದರ್​ ಶಾಹವಲಿ ದರ್ಗಾ ಸೇವಾ ಸಮಿತಿಯಿಂದ ಕೊಪ್ಪಳದ ತೆಗ್ಗಿನಕೇರಾ ಓಣಿಯ ಅಬುಬಕರ್​ ಮಸೀದಿ ಬಳಿ ಏ.20ರಂದು ಬೆಳಗ್ಗೆ 9ರಿಂದ ಉಚಿತ ಖತ್ನಾ ಶಿಬಿರ ಆಯೋಜಿಸಲಾಗಿದೆ ಎಂದು ಹಜರತ್​ ಸದರ್​ ಶಾಹವಲಿ ದರ್ಗಾ ಸೇವಾ ಸಮಿತಿ ಸಂಘಟಕ ಸೈಯದ್​ ಯಾಖೂಬ್​ ಹುಸೇನಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಖತ್ನಾ ಕಾರ್ಯ ಬಳಿಕ ಲುಂಗಿ, ಟೋಪಿ ಸೇರಿ ಇತರ ವಸ್ತುಗಳ ಕಿಟ್​ ನೀಡಲಾಗುವುದು. ಸಮಸ್ಯೆಗಳಾದಲ್ಲಿ ವೈದ್ಯರು ಮನೆಗೆ ತೆರಳಿ ಚಿಕಿತ್ಸೆ ನೀಡುವರು. ಈಗಾಗಲೇ 50-60 ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ವೈದ್ಯ ಹಸನ್​ ಅಲಿ ನಿಂಗಾಪುರ ಶಿಬಿರ ನಡೆಸುವರು. ಸಮಿತಿಯಿಂದ ಕಳೆದ 26 ವರ್ಷಗಳಿಂದ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಸೈಯ್ಯದ್​ ಹಯಾತ್​ ಪೀರಾ ಹುಸೇನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net