ಕುರಿ ಖರೀದಿಸಿ ದುಡ್ಡು ಕೊಡುವ ಬದಲು ಮಾರಿದಾತನನ್ನು ಕೊಲೆ ಮಾಡಿದ !

Published on

ಕೊಪ್ಪಳ: ನಗರದ ಹೊರವಲಯದ ಮಳೆಮಲ್ಲೇಶ್ವರ ದೇವಸ್ಥಾನ ಬಳಿ ಪತ್ತೆಯಾಗಿದ್ದ ಯುವಕನ ಮೃತದೇಹ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನಿಂದ ಕುರಿ ಖರೀದಿಸಿದ ವ್ಯಕ್ತಿ ಹಣ ನೀಡುವ ಬದಲು ಮಾರಿದಾತನನ್ನೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮೃತನನ್ನು ಮೋರನಾಳ ಗ್ರಾಮದ ಬಸವರಾಜ ಎಂದು ಗುರುತಿಸಲಾಗಿದೆ. ಗ್ರಾಮದ ಬಸಪ್ಪ ಘಂಟಿ ಎಂಬಾತ ಮೃತ ಯುವಕನಿಂದ ₹42,000 ಗೆ ನಾಲ್ಕು ಕುರಿ ಖರೀದಿಸಿದ್ದ. ₹12,000 ಮುಂಗಡವಾಗಿ ನೀಡಿದ್ದಾನೆ‌. ಬಾಕಿ ₹30 ಸಾವಿರ ನೀಡಬೇಕಿತ್ತು.

ಡಿ.15ರಂದು ಬಸವರಾಜನನ್ನು ಆರೋಪಿ ತನ್ನ ಬೈಕ್ ನಲ್ಲಿ ಕೂಕನಪಳ್ಳಿ ಸಂತೆಗೆ ಕರೆದೊಯ್ದಿದ್ದ. ವಾಪಸ್ ಬರುವಾಗ ಮಳೆ ಮಲ್ಲೇಶ್ವರ ಬಳಿ ಬೆಟ್ಟದಲ್ಲಿ ಕರೆದೊಯ್ದು ಕೊಲೆ ಮಾಡಿದ್ದಾನೆ.

ಬಾಕಿ ಹಣ ನೀಡುವ ಕಾರಣಕ್ಕೆ ತನ್ನ ಅಳಿಯನನ್ನು ಕೊಲೆ ಮಾಡಿದ್ದಾನೆ ಎಂದು ಮೃತನ ಮಾವ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net