ದೇಣಿಗೆ ಸಂಗ್ರಹಿಸಿ ರಸ್ತೆ ನಿರ್ಮಿಸಿದ ಜನ

district koppal mudlapura village road work people donation
Published on

ಕೊಪ್ಪಳ: ತಾಲೂಕಿನ ಕಿನ್ನಾಳ ಬಳಿಯ ಮುದ್ಲಾಪುರ ಗ್ರಾಮದ ರಸ್ತೆ ಹದಗೆಟ್ಟು 15 ವರ್ಷವಾಗಿದೆ. ಸಂಬಂಧಿಸಿದ ಇಲಾಖೆ ಈವರೆಗೂ ನಿರ್ಮಿಸಿಲ್ಲ. ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸುಸ್ತಾದ ಗ್ರಾಮಸ್ಥರು ತಾವೇ ದೇಣಿಗೆ ಸಂಗ್ರಹಿಸಿ ರಸ್ತೆ ನಿರ್ಮಿಸುತ್ತಿದ್ದಾರೆ.

ಕಿನ್ನಾಳದಿಂದ ಗ್ರಾಮಕ್ಕೆ 3.5 ಕಿ.ಮೀ. ರಸ್ತೆಯಿದೆ. ಕೊಪ್ಪಳ ತಾಲೂಕಿಗೆ ಗ್ರಾಮ ಒಳಪಟ್ಟರೂ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ರಸ್ತೆ ಹಾಳಾಗಿ ಹಲವು ವರ್ಷಗಳಾಗಿದೆ. ರಿಪೇರಿ ಮಾಡಿಸುವಂತೆ ಗ್ರಾಮಸ್ಥರು ಹಲವು ಬಾರಿ ಶಾಸಕ, ಸಚಿವರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ, ಯಾರೂ ರಸ್ತೆ ನಿರ್ಮಿಸುವ ಮನಸ್ಸು ಮಾಡಿಲ್ಲ. ಅನುದಾನವೂ ಬಿಡುಗಡೆಯಾಗಿಲ್ಲ. ನಿತ್ಯ ಗ್ರಾಮಸ್ಥರು ವಿವಿಧ ಕೆಲಸ ಕಾರ್ಯಗಳಿಗೆ ಕಿನ್ನಾಳ, ಕೊಪ್ಪಳಕ್ಕೆ ಬರಬೇಕಿದೆ.

ಒಂದೇ ರಸ್ತೆ ಇದ್ದು ನಿತ್ಯ ಕಷ್ಟು ಅನುಭವಿಸುತ್ತಲೇ ಓಡಾಡುತ್ತಿದ್ದಾರೆ. 120ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 1500 ಜನಸಂಖ್ಯೆ ಇದೆ. ಶಾಲಾ&ಕಾಲೇಜು ಮಕ್ಕಳು ದಿನವೂ ಇದೇ ರಸ್ತೆಯಲ್ಲಿ ಕಷ್ಟಪಟ್ಟು ತೆರಳುತ್ತಿದ್ದಾರೆ. ತಗ್ಗು&ಗುಂಡಿಗಳಿ ಬಿದ್ದಿದ್ದು ಅನಾರೋಗ್ಯ ಪೀಡಿತರು, ಗರ್ಭಿಣಿಯರು ಪ್ರಯಾಣಿಸಲು ಕಣ್ಣೀರು ಹಾಕುವಂತಾಗಿತ್ತು. ಆಡಳಿತದ ರ್ನಿಲಕ್ಷ$್ಯದಿಂದ ಬೇಸತ್ತ ಗ್ರಾಮಸ್ಥರು ತಾವೇ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಈವರೆಗೆ 1&2 ಲಕ್ಷ ರೂ. ಸಂಗ್ರಹವಾಗಿದ್ದು ರಸ್ತೆಗೆ ಮರಂ ಹಾಕುತ್ತಿದ್ದಾರೆ.

6 ಹಿಟಾಚಿ ಹಾಗೂ 10 ಟ್ರಾ$್ಯಕ್ಟರ್​ ಬಳಸಿ ಮಂಗಳವಾರ ರಸ್ತೆ ಸಮತಟ್ಟು ಮಾಡಿದರು. ಮರಂ ಹಾಕಿ ಗಟ್ಟಿಗೊಳಿಸಿದರು. ಗ್ರಾಮದ ಪ್ರಮುಖರಾದ ವಿರುಪಾಕ್ಷಪ್ಪ ಬಾರಕೇರ, ಉಮೇಶ ಎತ್ತಿನಮನಿ, ಯಲ್ಲಪ್ಪ ಹಳೇಮನಿ, ಗವಿಸಿದ್ದಪ್ಪ ಪೊಲೀಸ್​, ರಮೇಶ ಎತ್ತಿನಮನಿ, ದೇವಪ್ಪ ಎತ್ತಿನಮನಿ ಇತರರು ಮುಂದಾಳತ್ವವಹಿಸಿ ಕಾಮಗಾರಿಗೆ ಚಾಲನೆ ನೀಡಿದರು. ಇಂದು ಬಹುತೇಕ ಕಾಮಗಾರಿ ಮುಗಿಯಲಿದ್ದು ರಸ್ತೆ ಸಂಚಾರ ಸುಲಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net