ಜಾಗೃತಿ ಜನಾಂದೋಲನ 17ರಿಂದ

district koppal mspl allamaprabhu protest
Published on

ಕೊಪ್ಪಳ: ಕಾರ್ಖಾನೆ ವಿಸ್ತರಣೆಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ವಿರೋಧ ವ್ಯಕ್ತಪಡಿಸಿದ್ದು ೆ.17ರಿಂದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜಾಗೃತಿ ಜನಾಂದೋಲನ ನಡೆಸಲು ತೀರ್ಮಾನಿಸಿದೆ.

ಈ ಕುರಿತು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸಮಿತಿ ಸದಸ್ಯರ ಸಭೆ ನಡೆಸಿ ರ್ನಿಣಯ ಕೈಗೊಂಡಿದ್ದಾರೆ. ಬಲ್ಡೋಟಾ ಇತರೆ 50 ಕ್ಕೂ ಹೆಚ್ಚಿನ ಕಾರ್ಖಾನೆಗಳ ಬೂದಿ, ಧೂಳು ಪರಿಸರ ಮಾಲಿನ್ಯದಿಂದ ಕೊಪ್ಪಳ ನಗರ ಹಾಗೂ ಸುತ್ತಲಿನ ಗ್ರಾಮಗಳ ಜನರು ಹಲವು ರೋಗಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಬಲ್ಡೋಟಾ ಸಂಸ್ಥೆ ಕಾರ್ಖಾನೆ ವಿಸ್ತರಣೆ ಘೋಷಿಸಿದೆ. ಇದರಿಂದ ಮತ್ತಷ್ಟು ತ್ಯಾಜ್ಯ ಹೆಚ್ಚಲಿದೆ.

ೆ.17ರಿಂದ 21ವರೆಗೆ ಕೊಪ್ಪಳ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಆಂದೋಲ ನಡೆಸಲಾಗುವುದು. ೆ.22ರಂದು ಬೃಹತ್​ ವಿಚಾರ ಸಂಕಿರಣ ನಡೆಸಲಾಗುವುದು. ಪರಿಸರ ವಿಜ್ಞಾನಿ ಡಾ.ನಾಗೇಶ ಹೆಗಡೆ ಭಾಗಿಯಾಗಲಿದ್ದಾರೆ. ಅಣು ವಿದ್ಯುತ್​ ಸ್ಥಾವರ ಸ್ಥಾಪನೆ ಕುರಿತು ಚರ್ಚಿಸಲಾಗುವುದು. ಸಿಎಂ, ಸಚಿವ, ಸಂಸದ, ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಮೂರು ಪಕ್ಷಗಳ ಸಂಸದರಿಗೆ ಪಾರ್ಲಿಮೆಂಟ್​ನಲ್ಲಿ ಧ್ವನಿ ಎತ್ತಲು ಆಗ್ರಹಿಸುವುದು. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ರೂಪಿಸುವುದಾಗಿ ರ್ನಿಣಯಿಸಿದೆ. ಜತೆಗೆ ಹೋರಾಟಕ್ಕೆ 9 ಸಂಚಾಲಕರ ಸಮಿತಿ ರಚಿಸಿದೆ.

ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ, ಪ್ರಮುಖರಾದ ಮಹಾಂತೇಶ ಕೊತಬಾಳ, ಡಿ.ಎಚ್​.ಪೂಜಾರ, ಹನುಮಂತಪ್ಪ ಹೊಳೆಯಾಚೆ, ಬಸವರಾಜ ಶೀಲವಂತರ, ಟಿ.ರತ್ನಾಕರ, ಕಾಸಿಂ ಸರ್ದಾರ, ಶರಣು ಗಡ್ಡಿ, ಜ್ಯೊತಿ ಗೊಂಡಬಾಳ, ಕೆ.ಬಿ.ಗೋನಾಳ, ಕಾಶಪ್ಪ ಚಲುವಾದಿ, ರಘು ಚಾಕರಿ, ರಾಮಣ್ಣ ಚೌಡಕಿ, ಮುದಕಪ್ಪ ನರೆಗಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net