ತೋಟಗಾರಿಕೆ ಕ್ಲಸ್ಟರ್ ವ್ಯಾಪ್ತಿಗೆ ಕೊಪ್ಪಳ ಸೇರಿಸಲು ಎಂಪಿ‌ ಸಂಗಣ್ಣ ಮನವಿ

district koppal mp sanganna karadi memorandum to horticulture md of central government
koppal mp sanganna karadi memorandum to horticulture md of central government
ಕೊಪ್ಪಳ ಜಿಲ್ಲೆಯನ್ನು ಕೇಂದ್ರ ತೋಟಗಾರಿಕಾ ಕ್ಲಸ್ಟರ್​ ವ್ಯಾಪ್ತಿಗೆ ಸೇರಿಸಲು ಒತ್ತಾಯಿಸಿ ಸಂಸದ ಸಂಗಣ್ಣ ಕರಡಿ ಮಂಗಳವಾರ ಕೇಂದ್ರ ತೋಟಗಾರಿಕೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾಕೇಶ್​ ರಂಜನ್​ಗೆ ದೆಹಲಿಯಲ್ಲಿ ಮನವಿ ಸಲ್ಲಿಸಿದರು.
Published on

ಕೊಪ್ಪಳ: ಚಿತ್ರದುರ್ಗದಲ್ಲಿ ನಿರ್ಮಿಸುವ ತೋಟಗಾರಿಕೆ ಕ್ಲಸ್ಟರ್​ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆಯನ್ನು ಸೇರಿಸಿ. ದಾಳಿಂಬೆ ಬೆಳೆಯುವ ರೈತರಿಗೆ ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನ ನೀಡಲು ಒತ್ತಾಯಿಸಿ ಸಂಸದ ಸಂಗಣ್ಣ ಕರಡಿ ಮಂಗಳವಾರ ಕೇಂದ್ರ ತೋಟಗಾರಿಕೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾಕೇಶ್​ ರಂಜನ್​ಗೆ ದೆಹಲಿಯಲ್ಲಿ ಮನವಿ ಸಲ್ಲಿಸಿದರು.

ರಾಷ್ಟ್ರೀಯ ತೋಟಗಾರಿಕಾ ಮಂಡಳಿ ದೇಶದಾದ್ಯಂತ ತೋಟಗಾರಿಕೆ ಕ್ಲಸ್ಟರ್​ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಯೋಜನೆಯ ಭಾಗವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕ್ಲಸ್ಟರ್​ ನಿರ್ಮಿಸಲು ಮುಂದಾಗಿದೆ. ನಮ್ಮ ಭಾಗದ ದಾಳಿಂಬೆ ರಫ್ತುದಾರರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ.

ಚರ್ಚೆ ವೇಳೆ ಕೊಪ್ಪಳ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್​ ದಾಳಿಂಬೆ ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸರಿಯಾದ ಮಾರುಕಟ್ಟೆ, ಮೂಲಸೌಕರ್ಯಗಳ ಕೊರತೆ ಇದೆ. ಗುಣಮಟ್ಟದ ದಾಳಿಂಬೆ ಬೆಳೆದ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕಿದೆ ಎಂದರು.

ಚಿತ್ರದುರ್ಗ ಕ್ಲಸ್ಟರ್​ ವ್ಯಾಪ್ತಿಗೆ ಕೊಪ್ಪಳ ಸೇರಿಸಿಲ್ಲ. ಪರಿಣಾಮ ಇಲ್ಲಿನ ರೈತರು ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊಪ್ಪಳ ಜಿಲ್ಲೆಯನ್ನು ಕ್ಲಸ್ಟರ್​ ವ್ಯಾಪ್ತಿಗೆ ಸೇರಿಸಿದಲ್ಲಿ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ರೈತರಿಗೆ ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನ, ಚಿತ್ರದುರ್ಗ ಜಿಲ್ಲೆಯಲ್ಲಿ ನಿಮಾರ್ಣವಾಗುವ ಕ್ಲಸ್ಟರ್​ ವ್ಯಾಪ್ತಿಗೆ ಜಿಲ್ಲೆಯನ್ನು ಸೇರ್ಪಡೆಗೊಳಿಸಲು ಮನವಿ ಸಲ್ಲಿಸಿದ್ದೇನೆ. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. -ಸಂಗಣ್ಣ ಕರಡಿ. ಕೊಪ್ಪಳ ಸಂಸದ.

-ಸಂಗಣ್ಣ ಕರಡಿ. ಕೊಪ್ಪಳ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net