

ಕೊಪ್ಪಳ: ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡಿದ್ದ ಸಂಸದ ಸಂಗಣ್ಣ ಕರಡಿ ಸಾಮಾಜಿಕ ಜಾಲತಾಣಗಳಿಂದಲೂ ದೂರವಾಗಿದ್ದರು. ಮುನಿಸು ಶಮನಗೊಂಡ ಕಾರಣ ಸೋಮವಾರ ಸಿದ್ಧಗಂಗಾ ಶ್ರೀಗಳ ಜಯಂತಿಗೆ ಶುಭಕೋರುವ ಮೂಲಕ ಆ್ಯಕ್ಟಿವ್ ಆಗಿದ್ದಾರೆ.
ಮಾ.16ರಂದು ಗಿಣಿಗೇರಾ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮದ ಲೈವ್ ನೀಡಿದ್ದ ಸಂಗಣ್ಣ ನಂತರ ಕಾರ್ಯಕರ್ತರ ಆಕ್ರೋಶ, ಪ್ರತಿಭಟನೆ, ಸ್ವಾಭಿಮಾನಿ ಸಮಾವೇಶದ ೋಟೋ, ವಿಡಿಯೋ ಹಂಚಿಕೊಂಡಿದ್ದರು. ಅದಾದ ಬಳಿಕ ಮೌನಕ್ಕೆ ಶರಣಾಗಿದ್ದು, ಸಾಮಾಜಿಕ ಜಾಲತಾಣಗಳಿಂದಲೂ ಅಂತರ ಕಾಯ್ದುಕೊಂಡಿದ್ದರು. ಸೋಮವಾರ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜತೆಗೆ ೇಸ್ಬುಕ್ಗೆ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ.