ಸಂಸದರಿಂದ ಮೊಬೈಲ್​ ಫಿಶ್​ ಕ್ಯಾಂಟೀನ್​ ವಿತರಣೆ

district koppal mp rajashekhar hitnala fisheries department vehicle
Published on

ಕೊಪ್ಪಳ: ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯಡಿ ಮಂಜೂರಾಗಿರುವ ಮತ್ಸ ವಾಹಿನಿ ಮೊಬೈಲ್​ ಫಿಶ್​ ಕ್ಯಾಂಟೀನ್​ ವಾಹನಗಳನ್ನು ಶುಕ್ರವಾರ ಸಂಸದ ರಾಜಶೇಖರ ಹಿಟ್ನಾಳ ಲಾನುಭವಿಗಳಿಗೆ ವಿತರಿಸಿದರು.

ನಂತರ ಮಾತನಾಡಿ, ಸ್ವಯಂ ಉದ್ಯೋಗ ಹಾಗೂ ಸ್ವಾವಲಂಬನೆಗೆ ಮೀನುಗಾರಿಕೆ ಇಲಾಖೆಯಿಂದ ನೀಡಿರುವ ವಾಹನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಿ ಎಂದು ಫಲಾನುಭವಿಗಳಿಗೆ ತಿಳಿಸಿದರು.

ಮೀನುಗಾರಿಕೆ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಯೋಜನೆಯಡಿ ಕೊಪ್ಪಳ ಜಿಲ್ಲೆಗೆ 3 ಮೊಬೈಲ್​ ಫಿಶ್​ ಕ್ಯಾಂಟೀನ್​ಗಳನ್ನು ಹಂಚಿಕೆ ಮಾಡಲಾಗಿದೆ. ಲಾನುಭವಿ 50 ಸಾವಿರ ರೂ. ಠೇವಣಿ ಮಾಡಬೇಕು. ನಂತರ ಪ್ರತಿ ತಿಂಗಳು 3 ಸಾವಿರ ರೂ. ಬಾಡಿಗೆ ಭರಿಸಬೇಕೆಂದು ಮಾಹಿತಿ ನೀಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಡಿಎಚ್​ಒ ಡಾ.ಲಿಂಗರಾಜು ಟಿ., ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಪಿ.ಎಂ.ಮಲ್ಲಯ್ಯ, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಆನಂದ ಪಾಟೀಲ, ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷರಾದ ಏಕನಾಥ, ಉಪಾಧ್ಯಕ್ಷ ಸಯ್ಯದ್​ ಮಹೆಬೂಬ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net