

ಕೊಪ್ಪಳ: ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಬದಲಾವಣೆ ಮಾಡುವಂತೆ ಒತ್ತಾಯಿಸಿ ಸಂಸದ ರಾಜಶೇಖರ ಹಿಟ್ನಾಳ ಕೇಂದ್ರ ಜಲ ಆಯೋಗ ಅಧ್ಯಕ್ಷ ರಾಕೇಶ್ಗೆ ಸಿಂಗ್ಗೆ ಬುಧವಾರ ದೆಹಲಿಯಲ್ಲಿ ಮನವಿ ಸಲ್ಲಿಸಿದರು.
ಜಲಾಶಯ ಅಂತಾರಾಜ್ಯ ಯೋಜನೆ. ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. 1949ರಲ್ಲಿ ಆರಂಭವಾಗಿ 1953ರಲ್ಲಿ ಲೋಕಾರ್ಪಣೆಗೊಂಡಿದೆ. ಆಗಿನಿಂದ ಈವರೆಗೆ ಕ್ರಸ್ಟ್ ಗೇಟ್ ಬದಲಾಯಿಸಿಲ್ಲ. ಇತ್ತೀಚೆಗೆ ಜಲಾಶಯದ 19ನೇ ಕ್ರಸ್ಟ್ ಗೇಟ್ ತುಂಡಾಗಿದ್ದು, ಹಾನಿ ಸಂಭವಿಸಿದೆ. ಅಪಾರ ನೀರು ನದಿಗೆ ಹರಿದು ಹೋಗಿದೆ. ತಜ್ಞರು ಕ್ರಸ್ಟ್ ಗೇಟ್ ಬದಲಾವಣೆಗೆ ಶಿಾರಸ್ಸು ಮಾಡಿದ್ದಾರೆ. ಟಿಬಿ ಬೋರ್ಡ್ ಜಲಾಶಯ ನಿರ್ಮಿಸುತ್ತಿದೆ ಎಂದು ತಿಳಿಸಿದರು.
ಭವಿಷ್ಯದಲ್ಲಿ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಗೇಟ್ ಬದಲಾವಣೆ ಮಾಡಬೇಕು. ಹೊಸ ಗೇಟ್ ಅಳವಡಿಸಬೇಕು. ಜಲ ಆಯೋಗ, ಕೇಂದ್ರ ಸರ್ಕಾರ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಬೇಕೆಂದು ಮನವಿ ಮಾಡಿದರು.