ಹೊಸ ಸಂಸದರಿಗೆ ಹಳೆಯ ಸವಾಲು

koppal MP Rajashekhar hitnal development issues
Published on
  • ಹಿಟ್ನಾಳ ಮೇಲೆ ಹೆಚ್ಚಿದ ನಿರೀಕ್ಷೆ
  • ರೈಲ್ವೆ, ಆರೋಗ್ಯ, ವಿಮಾನ ನಿಲ್ದಾಣಕ್ಕೆ ಬೇಕು ಆದ್ಯತೆ

ಕೊಪ್ಪಳ: ಬದಲಾದ ರಾಜಕೀಯದಲ್ಲಿ ರಾಜಶೇಖರ ಹಿಟ್ನಾಳ ಕೊಪ್ಪಳ ಲೋಕಸಭಾ ಕ್ಷೇತ್ರದ ಚುಕ್ಕಾಣಿ ಹಿಡಿದಿದ್ದಾರೆ. ಜಿಪಂ ಅಧ್ಯಕ್ಷರಾಗಿ ಎರಡು ಅವಧಿ ಆಡಳಿತ ಅನುಭವ ಹೊಂದಿದ್ದಾರೆ. ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಅಭಿವೃದ್ಧಿ ವಿಷಯವಾಗಿ ಜನರು ಹತ್ತಾರು ಕನಸು ಹೊತ್ತಿದ್ದಾರೆ. ಹೊಸ ಯೋಜನೆಗಳಿಗಿಂದ ಹಳೆಯ ಯೋಜನೆಗಳು, ಕಾಮಗಾರಿಗಳ ಅನುಷ್ಠಾನ ಬಾಕಿ ಇದೆ. ನೂತನ ಸಂಸದರಿಗೆ ದೂದೃಷ್ಟಿ ಯೋಜನೆಗಳ ಜತೆಗೆ ಹಳೇ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸವಾಲು ಹೆಗಲೇರಿದೆ.

ಜಿಲ್ಲಾ ಕೇಂದ್ರ ಕೊಪ್ಪಳ ಹಾಗೂ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳೊಂದಿಗೆ ಸಿರಗುಪ್ಪ, ಮಸ್ಕಿ, ಸಿಂಧನೂರು ಕ್ಷೇತ್ರಗಳು ಲೋಕಸಭಾ ಕ್ಷೇತ್ರ ವ್ತಾಪ್ತಿಯಲ್ಲಿವೆ. ಎರಡು ದಶಕಗಳಷ್ಟು ಹಳೆಯದಾದ ಮುನಿರಾಬಾದ್​&ಮೆಹಬೂಬ್​ ನಗರ, ಗದಗ&ವಾಡಿ ರೈಲ್ವೆ ಯೋಜನೆಗಳು ಇನ್ನು ಪ್ರಗತಿ ಹಂತದಲ್ಲಿವೆ. ಸಂಗಣ್ಣ ಕರಡಿ ಎರಡು ಅವಧಿಯಲ್ಲಿ ಶ್ರಮವಹಿಸಿದ ಕಾರಣ ಸಿಂಧನೂರು ಹಾಗೂ ಕುಷ್ಟಗಿವರೆಗೆ ರೈಲು ಓಡಾಡುವಷ್ಟು ಯೋಜನೆಗಳು ಪ್ರಗತಿ ಕಂಡಿವೆ. ಇದರ ಜತೆಗೆ ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣ ಅಭಿವೃದ್ಧಿ ಆಗುತ್ತಿದ್ದು, ಎರಡನೇ ್ಲಾಟ್​ಾಮ್​ರ್, ಗೂಡ್ಸ್​ ರೈಲು ನಿಲುಗಡೆಗೆ ಪ್ರತ್ಯೇಕ ನಿಲ್ದಾಣ ನಿರ್ಮಾಣ ಜರೂರಿದೆ.

ಇನ್ನು ಇತ್ತ ರಾಯಚೂರುವರೆಗೆ ಅತ್ತ ವಾಡಿವರೆಗೆ ರೈಲು ಓಡಾಟ ಆರಂಭವಾಗಬೇಕಿದೆ. ಗಂಗಾವತಿ ರೈಲ್ವೆ ನಿಲ್ದಾಣ ಅಭಿವೃದ್ಧಿ ಆಗಬೇಕೆಂಬ ಕನಸು ಆ ಭಾಗದ ಜನರ ಒತ್ತಾಸೆ. ಕೊಪ್ಪಳ, ಮುನಿರಾಬಾದ್​ ರೈಲು ನಿಲ್ದಾಣ ಆಧುನೀಕರಣ, ಹಲವು ರೈಲ್ವೆ ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಅವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಜವಾಬ್ದಾರಿಯೂ ಹಿಟ್ನಾಳ ಮೇಲಿದೆ.

ಇವುಗಳ ಜತೆಗೆ ಆರೋಗ್ಯ ವಲಯದಲ್ಲಿ ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆಗೆ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಬೇಕು. ಇದಕ್ಕೆ 20 ಎಕರೆಯಷ್ಟು ಜಾಗ ಬೇಕಿದೆ. ಜಾಗ ಅಂತಿಮಗೊಂಡಲ್ಲಿ ಪ್ರಸ್ತಾವನೆ ಸಲ್ಲಿಸಬಹುದು. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿದ್ದು, ಹಿಟ್ನಾಳ ಸಹ ಕಾಂಗ್ರೆಸ್​ ಪ್ರತಿನಿಧಿಸುತ್ತಿರುವ ಕಾರಣ ಹಿಂದಿಗಿಂತ ಇವರ ಮೇಲೆ ನಿರೀೆ ಹೆಚ್ಚಾಗಿವೆ. ಜತೆಗೆ ಇಎಸ್​ಐ ಆಸ್ಪತ್ರೆ ಮಂಜೂರಾಗಿದ್ದರೂ ಸ್ವಂತ ಕಟ್ಟಡವಿಲ್ಲ. ಹಲವು ವರ್ಷಗಳ ಹಿಂದಯೇ ಜಾಗ ಗುರುತಿಸಿದರೂ ಕಾಮಗಾರಿ ಆರಂಭಿಸಿಲ್ಲ. ಸದ್ಯ 30 ಹಾಸಿಗೆ ತಾತ್ಕಾಲಿಕ ಆಸ್ಪತ್ರೆ ಆರಂಭಿಸಿದ್ದರೂ, ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಮಿಕರು ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ತೆರಳಬೇಕಾದ ಸ್ಥಿತಿ ಇದೆ. ಸ್ಥಳಿಯವಾಗಿಯೇ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆ ನಿರ್ಮಾಣವಾದಲ್ಲಿ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಅನುಕೂಲವಾಗಲಿದೆ.

ಸಾರಿಗೆ ಸಂಪರ್ಕ ಅಭಿವೃದ್ಧಿ ಅವಶ್ಯವಿದೆ. ಜಿಲ್ಲೆಯಲ್ಲಿ ಅಂಜನಾದ್ರಿ ಬೆಟ್ಟ, ಮೋರೆರ ಬೆಟ್ಟ, ಆನೆಗೊಂದಿ, ಇಟಗಿ ಮಹಾದೇವ ದೇವಾಲಯ, ದೇಶದ ಮೊದಲ ಆಟಿಕೆ ಕ್ಲಸ್ಟರ್​, ಹತ್ತಾರು ಕೈಗಾರಿಕೆಗಳಿವೆ. ಹಲವು ಜಿಲ್ಲೆಗಳಿಗೆ, ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮಧ್ಯಭಾಗದಲ್ಲಿ ಸಂಪರ್ಕಕ್ಕೆ ಅನುಕೂಲಕರವಾಗಿದೆ. ವಿಮಾನ ನಿಲ್ದಾಣ ಆರಂಭಿಸಿದಲ್ಲಿ ಸಾರಿಗೆ ಸಂಪರ್ಕ ವೃದ್ಧಿಯಾಗಲಿದೆ. ಈ ಹಿಂದೆಯೇ ಕುಷ್ಟಗಿ ರಸ್ತೆಯಲ್ಲಿ ಜಾಗ ಗುರುತಿಸಲಾಗಿದೆ. ಕೆಕೆಆರ್​ಡಿಬಿಯಿಂದ ಭೂ ಸ್ವಾಧಿನಕ್ಕೆ 40 ಕೋಟಿ ರೂ. ನೀಡಿ ವಾಸಪ್​ ಪಡೆಯಲಾಗಿದೆ. ಅದನ್ನು ಅನುಷ್ಠಾನಗೊಳಿಸಿದಲ್ಲಿ ಜಿಲ್ಲೆ ಅಭಿವೃದ್ಧಿಗೆ ವೇಗ ದೊರೆಯಲಿದೆ.

ರೋಪ್​ ವೇ ಗೆ ಸಿಗಲಿ ವೇಗ
ರಾಮಾಯಣದ ಬಂಟ ಆಂಜನೇಯ ಜನಿಸಿದ ಅಂಜನಾದ್ರಿ ಬೆಟ್ಟ ಜಗತ್ತಿನ ಗಮನ ಸೆಳೆಯುತ್ತಿದೆ. ವಿವಿಧ ದೇಶಗಳಿಂದ ಸಾವಿರಾರು ಭಕ್ತರು ನಿತ್ಯ ಭೇಟಿ ನೀಡುತ್ತಾರೆ. ಕಡಿದಾದ ಬೆಟ್ಟದಲ್ಲಿ 545 ಮೆಟ್ಟಿಲುಗಳನ್ನು ಹತ್ತಿಕೊಂಡೇ ದರ್ಶನಕ್ಕೆ ತೆರಳಬೇಕು. ರೋಪ್​ ವೇ ನಿರ್ಮಿಸಬೇಕೆಂಬುದು ಬಹುದಿನದ ಬೇಡಿಕೆ. ಕೇಂದ್ರವೂ ಗ್ರೀನ್​ ಸಿಗ್ನಲ್​ ನೀಡಿದ್ದು, ಾಲೋಅಪ್​ ಮಾಡಿ ಕಾಮಗಾರಿ ಅನುಷ್ಠಾನ ಮಾಡಬೇಕಿದೆ. ರೋಪ್​ ವೇ ಆದಲ್ಲಿ ವಯಸ್ಸಾದವರಿಗೆ, ಆರೋಗ್ಯ ಸಮಸ್ಯೆ ಇರುವವರು ಸುಲಭವಾಗಿ ಬೆಟ್ಟ ಹತ್ತಲು ಅನುಕೂಲವಾಗಲಿದೆ.

ವಿಮಾನ ನಿಲ್ದಾಣ, ರೈಲ್ವೆ ಯೋಜನೆಗಳು, ಇಎಸ್​ಐ, ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆ ಅಗತ್ಯ ಹೆಚ್ಚಿದೆ. ಇವುಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡುವೆ. ಕ್ಷೇತ್ರ ದೊಡ್ಡದಿದ್ದು ತಿಳಿದುಕೊಳ್ಳುವುದು ಬಹಳ ಇದೆ. ಎಲ್ಲ ವಿಧಾನಸಭಾ ಕ್ಷೇತ್ರಗಳ ಜನರ ನಿರೀೆಗೆ ತಕ್ಕಂತೆ ಕೆಲಸ ಮಾಡುವೆ. ಕೇಂದ್ರದ ಯೋಜನೆಗಳು ಸಾಕಷ್ಟು ಇವೆ. ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುವೆ. ರಾಜಶೇಖರ ಹಿಟ್ನಾಳ. ಕೊಪ್ಪಳ ಸಂಸದ.

ರಾಜಶೇಖರ ಹಿಟ್ನಾಳ. ಕೊಪ್ಪಳ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net