ಸುಳ್ಳು ಹೇಳುವಲ್ಲಿ ಬಿಜೆಪಿಗರು ನಿಸ್ಸೀಮರು, ತಂಗಡಗಿ

district koppal pm modi minister shivaraj tangadagi
Published on

ಕೊಪ್ಪಳ: ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಾಜೀನಾಮೆ ವಿಷಯವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಮೋಸ ಮಾಡುತ್ತಾರೆ. ಪೊಲೀಸ್​ ಇಲಾಖೆಯಲ್ಲಿ ಅಣ್ಣಾಮಲೈ ಆರಾಮಾಗಿದ್ದರು. ಅವರನ್ನು ಕರೆದೊಯ್ದು ಮೋಸ ಮಾಡಿದ್ದಾರೆ. ಬಾರುಕೋಲು ತೆಗೆದುಕೊಂಡು ಮೈಗೆ ಬಡಿದಕೊಂಡು ಹೋರಾಟ ಮಾಡಿದರು. ಅವರನ್ನು ಬಳಸಿಕೊಂಡು ಈಗ ಬಿಸಾಡಿದ್ದಾರೆ. ಬಿಜೆಪಿಗರು ಯಾವಾಗಿನಿಂದಲೂ ಇದನ್ನೇ ಮಾಡುತ್ತಿದ್ದಾರೆ. ಹಿಂದೆ ನನ್ನನ್ನೂ ಕರೆದುಕೊಂಡು ಹೋಗಿ ಬಿಪಿ, ಶುಗರ್​ ಬರಿಸಿದರು. ಅಮಾಯಕರು, ಸಾಮಾನ್ಯ ಜನರ ಜೀವನದ ಜೊತೆ ಆಟವಾಡುವುದೇ ಇವರ ಕೆಲಸ. ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷಗಳಾಗಿದೆ. ದೇಶಕ್ಕೆ ಇವರ ಕೊಡುಗೆ ಏನು ಎಂದು ಶನಿವಾರ ಸುದ್ದಿಗಾರರ ಮೂಲಕ ಪ್ರಶ್ನಿಸಿದರು.

ಬಿಜೆಪಿ ಎಲ್​.ಕೆ.ಅಡ್ವಾಣಿ, ಮುರಳಿ ಮನೋಹರ ಸೇರಿ ಅನೇಕ ಹಿರಿಯರಿಗೆ ಅನ್ಯಾಯ ಮಾಡಿದೆ. ಈಗ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರಿಗೂ ಅನ್ಯಾಯ ಎಸಗಿದೆ. ಅವರ ಸಿದ್ಧಾಂತ ಬೇರೆ. ಕಾಂಗ್ರೆಸ್​ ಸಿದ್ಧಾಂತ ಬೇರೆ. ಅವರು ಬರುವುದಿಲ್ಲ. ನಮ್ಮ ಪಕ್ಷಕ್ಕೆ ಕರೆದುಕೊಳ್ಳುವ ಪ್ರಮೇಯ ನಮಗಿಲ್ಲ. ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡದಂತೆ ಹೈಕಮಾಂಡ್​ ಸೂಚನೆ ಇದ್ದು ಮಾತನಾಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net