

ಕೊಪ್ಪಳ: ನರೇಗಾ ಯೋಜನೆಯಡಿ ವಿವಿಧ ಸಾಧನೆ ಮಾಡಿರುವ ಜಿಲ್ಲೆಯ ಅಧಿಕಾರಿಗಳಿಗೆ ಬುಧವಾರ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ರ್ಖಗೆ ಪ್ರಶಸ್ತಿ ನೀಡಿ ಗೌರವಿಸಿದರು.
2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೆ ಮುನಿರಾಬಾದ ಡ್ಯಾಂ ಗ್ರಾಪಂ ಭಾಜನವಾಗಿದೆ. ಅಳವಂಡಿ ಗ್ರಾಪಂನ ಕಾಯಕ ಬಂಧು ಶ್ರೀದೇವಿ ಎಲಿಬಳ್ಳಿ ಉತ್ತಮ ಕಾಯಕ ಬಂಧು ಪ್ರಶಸ್ತಿಗೆ ಹಾಗೂ ಒಗ್ಗೂಡಿಸುವಿಕೆ ಯೋಜನೆಯಡಿ ತೋಟಗಾರಿಕೆ ಇಲಾಖೆ ಪ್ರಶಸ್ತಿ ಪಡೆದುಕೊಂಡಿವೆ.
ಮುನಿರಾಬಾದ್ ಡ್ಯಾಂ ಗ್ರಾಪಂ ಅಧ್ಯಕ್ಷ ಅಯೂಬ್ ಖಾನ್, ಉಪಾಧ್ಯೆ ಸೌಭಾಗ್ಯ ನಾಗರಾಜ, ಸದಸ್ಯರು ಹಾಗೂ ಪಿಡಿಒ ಮಹೇಶ ಸಜ್ಜನ ಪ್ರಶಸ್ತಿ ಸ್ವೀಕರಿಸಿದರು. ತಾಪಂ ಇಒ ದುಂಡಪ್ಪ ತುರಾದಿ, ಅಳವಂಡಿ ಗ್ರಾಪಂ ಅಧ್ಯೆ ಶಂಕ್ರಮ್ಮ ಜೋಗಿನ, ಪಿಡಿಒ ಕೊಟ್ರಪ್ಪ ಅಂಗಡಿ, ಗ್ರಾಮ ಕಾಯಕ ಮಿತ್ರ ಗೀತಾ ಕಿಲ್ಲೆದ ಪ್ರಶಸ್ತಿ ಪಡೆದರು. ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳ ತಂಡ ಅತ್ಯುತ್ತಮ ಒಗ್ಗೂಡಿಸುವಿಕೆ ಪ್ರಶಸ್ತಿ ಪಡೆಯಿತು.
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಶಾಸಕ ರಿಜ್ವಾನ್ ಹರ್ಷದ್, ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ರ್ವೆಜ್, ಉಮಾಮಹಾದೇವನ್ , ಅಯುಕ್ತ ಪವನಕುಮಾರ ಮಾಲಪಾಟಿ, ಅರುಂಧತಿ ಪ್ರಶಸ್ತಿ ನೀಡಿದರು. ಜಿಪಂನಿಂದ ಬೂದು ನಿರು ನಿರ್ವಹಣಾ ಕಾಮಗಾರಿ ಅನುಷ್ಠಾನ ಮಾದರಿ ಸ್ತಬ್ದಚಿತ್ರ ಗಮನ ಸೆಳೆಯಿತು.
ಕೊಪ್ಪಳ ತಾಲೂಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಾಲಚಂದ್ರನ್, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಎಡಿಪಿಸಿ ಮಹಾಂತಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸುರೇಶ್, ಜೆಇ ವಾಸಣ್ಣ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ವಿಶ್ವನಾಥ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ, ಗುರುರಾಜ ಇದ್ದರು.