

ಕೊಪ್ಪಳ: ತಾಲೂಕಿನ ಕಲ್ ದನಕನದೊಡ್ಡಿ ಗ್ರಾಮದಲ್ಲಿ ತಾಲೂಕು ಐಇಸಿ ಚಟುವಟಿಕೆ ಅಂಗವಾಗಿ ಸೋಮವಾರ ಇಂಗುಗುಂಡಿ, ಎರೆಹುಳು ತೊಟ್ಟಿ ನಿರ್ಮಾಣ ಹಾಗೂ ಸ್ವಚ್ಛತೆ ಜಾಗೃತಿ ಮೂಡಿಸಲಾಯಿತು.
ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರತಿಯೊಬ್ಬರು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇದರಿಂದ ಆರೋಗ್ಯವಾಗಿರಬಹದು. ದುಡ್ಡಿನಿಂದ ಆರೋಗ್ಯ ಕೊಂಡುಕೊಳ್ಳಲಾಗುವುದಿಲ್ಲ. ಬಚ್ಚಲು ನೀರು ರಸ್ತೆಗೆ ಹರಿಸಬಾರದು. ಇಂಗು ಗುಂಡಿ ನಿರ್ಮಿಸಿಕೊಳ್ಳಬೇಕು. ನರೇಗಾದಡಿ ಉದ್ಯೋಗ ಚೀಟಿ ಹೊಂದಿದವರು ಗ್ರಾಪಂಗೆ ಅರ್ಜಿ ಸಲ್ಲಿಸಿ. ಇಂಗು ಗುಂಡಿ ನಿರ್ಮಾಣಕ್ಕೆ 11 ಸಾವಿರ ರೂ. ಸಹಾಯಧನ ಪಡೆಯಬಹುದು ಎಂದರು.
ಪಿಡಿಒ ಯಮನೂರಪ್ಪ ಕಬ್ಬಣ್ಣನವರ ಮಾತನಾಡಿ, ನರೇಗಾದಡಿ ಕೇವಲ ಕೂಲಿ ಕೆಸಲವಲ್ಲದೇ ವೈಯಕ್ತಿಕ ಕಾಮಗಾರಿ ನಿರ್ಮಿಸಿಕೊಳ್ಳಬಹುದು. ದನ, ಕುರಿ ಶೆಡ್, ಬಚ್ಚಲುಗುಂಡಿ, ತೋಟಗಾರಿಕೆ ಬೆಳೆ, ಕಂದಕ, ಬದು, ಕೃಷಿಹೊಂಡ ನಿರ್ಮಾಣ, ಎರೆಹುಳು ತೊಟ್ಟಿ, ರೇಷ್ಮೆ ಇತ್ಯಾದಿ ಕಾಮಗಾರಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ತಾಂತ್ರಿಕ ಸಂಯೋಜಕಿ ಕವಿತಾ ಮಾತನಾಡಿದರು. ಗ್ರಾಪಂ ಸದಸ್ಯ ರವಿ ಒಂಟಿಗಾರ, ಸಿವಿಲ್ ತಾಂತ್ರಿಕ ಸಹಾಯಕ ಶರಣಯ್ಯ, ಕೃಷಿ ತಾಂತ್ರಿಕ ಸಹಾಯಕಿ ಸರಸ್ವತಿ, ಗ್ರಾಮಸ್ಥರಾದ ಯಮನೂರಪ್ಪ ಕೊಳ್ಳಿ, ಬಸವರಾಜ, ಪರ್ವತಮಲ್ಲಯ್ಯ, ಡಿಇಒ ಲಕ್ಷ$್ಮಣ ಹಿರೇಮನಿ, ಕಾಯಕ ಮಿತ್ರ ಯಂಕಮ್ಮ ವಾಲೀಕಾರ ಇತರರಿದ್ದರು.