ಜಿಲ್ಲಾಸ್ಪತ್ರೆಗೆ ಹೇಮಲತಾ ಭೇಟಿ

district koppal mlc hemalath hospital visit
Published on

ಕೊಪ್ಪಳ: ಬಾಣಂತಿ ಸಾವು ಹಿನ್ನೆಲೆಯಲ್ಲಿ ಬುಧವಾರ ನಗರದ ತಾಯಿ&ಮಕ್ಕಳ ಆಸ್ಪತ್ರೆಗೆ ವಿಧಾನ ಪರಿಷತ್​ ಸದಸ್ಯೆ ಹೇಮಲತಾ ನಾಯಕ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.

ಕಳೆದೊಂದು ವಾರದಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದಾರೆ. ಸಾವಿಗೆ ಕಾರಣವೇನು, ಯಾವಾಗ ದಾಖಲಾಗಿದ್ದರು, ಏನೇನು ಚಿಕಿತ್ಸೆ ನೀಡಲಾಗಿದೆ. ರೋಗಿಗಳಿಗೆ ಯಾವೆಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಶ್ನಿಸಿದರು. ದಾಖಲಾತಿ ವೀಸಿದರು. ಹೆರಿಗೆ ತಜ್ಞ ಡಾ.ನಾರಾಯಣಿ ಬಾಣಂತಿ ರೇಣುಕಾ ಸಾವಿಕೆ ಕಾರಣ ಹಾಗೂ ಚಿಕಿತ್ಸೆ ಬಗ್ಗೆ ತಿಳಿಸಿದರು. ನಂತರ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ, ಬಾಣಂತಿಯರಿಗೆ ಚಿಕಿತ್ಸೆ ಹೇಗಿದೆ ಎಂದು ಕೇಳಿ ತಿಳಿದುಕೊಂಡರು.

ಬಡವರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ವೈದ್ಯರು ರ್ನಿಲಕ್ಷ$್ಯ ಮಾಡದೇ ಉತ್ತಮ ಚಿಕಿತ್ಸೆ ನೀಡಿ. ತಾಯಿ&ಮಗುವಿನ ಆರೋಗ್ಯ ಕಾಪಾಡಿ. ನಿಷೇಧಿತ ಔಷಧ, ದ್ರಾವಣಗಳ ಬಗ್ಗೆ ಎಚ್ಚರಿಕೆವಹಿಸಿ ಎಂದು ವೈದ್ಯರಿಗೆ ಸಲಹೆ ನೀಡಿದರು. ಬಿಜೆಪಿ ನಾಯಕರಾದ ವಾಣಿಶ್ರೀ ಮಠದ, ಗಣೇಶ ಹೊರತಟ್ನಾಳ, ಸೋಮಣ್ಣ ಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net