ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕ ಕೊಡುಗೆ ಅಪಾರ

MLA Raghavendra Hitnala stoning ceremony in koppal labor building
ಕೊಪ್ಪಳದಲ್ಲಿ ಶಾಸಕ ರಾವೇಂದ್ರ ಹಿಟ್ನಾಳ ಕಟ್ಟಡ ಕಾರ್ಮಿಕರ ತಾತ್ಕಾಲಿಕ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ.ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ಜಿಪಂ ಮಾಜಿ ಸದಸ್ಯ ಪ್ರಸನ್ನ ಗಡಾದ್​, ಪ್ರಮುಖರಾ ಎಂ.ಕಾಟನ್​ ಪಾಷಾ, ಮುತ್ತುರಾಜ ಕುಷ್ಟಗಿ, ಅಮ್ಜದ್​ ಪಟೇಲ್​, ಸಿದ್ದು ಮ್ಯಾಗೇರಿ, ಕೆ.ಎಂ.ಸೈಯ್ಯದ್​, ಮಲ್ಲು ಪೂಜಾರ ಇದ್ದರು.
Published on

ಕೊಪ್ಪಳ: ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ರಾವೇಂದ್ರ ಹಿಟ್ನಾಳ ಅಭಿಪ್ರಾಯಪಟ್ಟರು.

ನಗರದ ಪದಕಿ ಲೇಔಟ್​ನಲ್ಲಿ ರಾಜ್ಯ ಕಟ್ಟಡ ಕಾರ್ಮಿಕರು ಹಾಗೂ ಇತರ ನಿರ್ಮಾಣ ಕಾರ್ಮಿಕರ ತಾತ್ಕಾಲಿಕ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜೀವನ ಸಾಗಿಸಲು ಕಾರ್ಮಿಕರು ಹಗಲಿರುಳು ಶ್ರಮಿಸುತ್ತಾರೆ. ಬಿಸಿಲು, ಮಳೆ, ಚಳಿ ಏನೇ ಇದ್ದರೂ ನಿರಂತರ ದುಡಿಯುತ್ತಾರೆ. ದುಡಿತಕ್ಕೆ ತಮ್ಮನ್ನು ಸಮರ್ಪಸಿಕೊಂಡಿರುತ್ತಾರೆ. ಇವರ ದುಡಿಮೆಯಿಂದಲೇ ದೇಶದ ಅಭಿವೃದ್ಧಿ ಸಾಗಿದೆ. ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆ ಜಾರಿ ಮಾಡಿದೆ. ದುಡಿಯುವವರಿಗಾಗಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನೆರವೇರಿಸಿ. ಕಳಪೆ ಆಗದಂತೆ ಎಚ್ಚರವಹಿಸಿ. ಕಟ್ಟಡಕ್ಕೆ ಬೇಕಾದ ಮೂಲ ಸೌಕರ್ಯ ಕಲ್ಪಿಸಿಕೊಡಲಾಗುವುದೆಂದು ಭರವಸೆ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ.ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ಜಿಪಂ ಮಾಜಿ ಸದಸ್ಯ ಪ್ರಸನ್ನ ಗಡಾದ್​, ಪ್ರಮುಖರಾ ಎಂ.ಕಾಟನ್​ ಪಾಷಾ, ಮುತ್ತುರಾಜ ಕುಷ್ಟಗಿ, ಅಮ್ಜದ್​ ಪಟೇಲ್​, ಸಿದ್ದು ಮ್ಯಾಗೇರಿ, ಕೆ.ಎಂ.ಸೈಯ್ಯದ್​, ಮಲ್ಲು ಪೂಜಾರ, ಮಂಜುನಾಥ ಗೊಂಡಬಾಳ, ಸಲೀಂ ಅಳವಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net