ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಹಾಸ್ಟೆಲ್​ ನಿರ್ಮಾಣ

district koppal mla raghavendra hitnala hostel
Published on

ಕೊಪ್ಪಳ: ಶಿಕ್ಷಣ ಪಡೆವವ ಪ್ರಮಾಣ ಹೆಚ್ಚಿದ್ದು, ಹಾಸ್ಟೆಲ್​ಗಳಿಗೆ ಬೇಡಿಕೆ ಹೆಚ್ಚಿದೆ. ಕ್ಷೇತ್ರದಲ್ಲಿ ಬೇಡಿಕೆಯಷ್ಟು ಹಾಸ್ಟೆಲ್​ ನಿರ್ಮಿಸಲಾಗುವುದೆಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.

ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್​ ನಂತರದ ಹಾಸ್ಟೆಲ್​ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಹಾಸ್ಟೆಲ್​ಪ್ರಮುಖ ಪಾತ್ರ ವಹಿಸುತ್ತಿವೆ. ಬಡ ಮಕ್ಕಳು ಬಹುಪಾಲು ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲಾಗುವುದು. ಹಾಸ್ಟೆಲ್​ ಸೇರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕಳೆದ ತಿಂಗಳು 2 ಹಾಸ್ಟೆಲ್​ ಮಂಜೂರಾಗಿವೆ. ಇನ್ನು 45 ಹಾಸ್ಟೆಲ್​ ಬೇಕೆಂದು ಬೇಡಿಕೆ ಇದೆ. ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವಿ ಮಾಡಿ ಮಂಜೂರು ಮಾಡಿಸಲಾಗುವುದು. ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಶಿಕ್ಷಣವಂತಾರಗಬೇಕೆಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಪ್ರಮುಖರಾದ ಕತೀಬ್​ ಬಾಷು, ರಾಮಣ್ಣ ಕಲ್ಲನವರ, ಅಜೀಮ್​ ಅತ್ತಾರ, ಅಕ್ಬರ್​ ಪಾಷಾ ಪಲ್ಟನ್​, ಮಾನ್ವಿ ಪಾಷಾ, ಪದ್ಮಾವತಿ ಕಂಬಳಿ, ಸೌಭಾಗ್ಯಲಕ್ಷಿ$್ಮ, ಅಧಿಕಾರಿಗಳಾದ ಶರಣಪ್ಪ, ಸೋಮಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net