ಬೆಳಗಾವಿಲಿ ಕಾಂಗ್ರೆಸ್​ ಶತಮಾನೋತ್ಸವ ಅಧಿವೇಶನ

district koppal mla raghavendra hitnala
Published on

ಕೊಪ್ಪಳ: ಬೆಳಗಾವಿಯಲ್ಲಿ 1924ರ ಡಿ.26, 27ರಂದು ಕಾಂಗ್ರೆಸ್​ ಮೊದಲ ಅಧಿವೇಶನ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದಿದೆ. ಅದರ ಶತಮಾನೋತ್ಸವದ ಸವಿ ನೆನಪಿಗೆ ಡಿ.26, 27ರಂದು ಎರಡು ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ವಿವಿಧ ನಾಯಕರು ಭಾಗಿಯಾಗಲಿದ್ದಾರೆಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.

ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ$್ಯ ತಂದುಕೊಡುವಲ್ಲಿ ಗಾಂಧೀಜಿ ಹಾದಿಯಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಬೆಳಗಾವಿಯ ಒಂದು ಪ್ರದೇಶದಲ್ಲಿ ಸಭೆ ನಡೆಸಿದ್ದು ಇತಿಹಾಸ. ಅದನ್ನು ನೆನಪಿಸುವ ಕೆಲಸವನ್ನು ಎಐಸಿಸಿ ಹಾಗೂ ಕೆಪಿಸಿಸಿ ಮಾಡುತ್ತಿವೆ. ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ಗಾಂಧೀಜಜಿ ಪುತ್ಥಳಿ ಅನಾವರಣಗೊಳಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಕಾಂಗ್ರೆಸ್​ ನಾಯಕರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ವಿವಿಧ ರಾಜ್ಯಗಳ 400ಕ್ಕೂ ಅಧಿಕ ಗಣ್ಯರು ಭಾಗಿಯಾಗುವರು. ಜಿಲ್ಲೆಯಿಂದಲೂ ಪಕ್ಷದಿಂದ ಸಭೆ ನಡೆಸಿದ್ದು, 25 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ. ಒಟ್ಟಾರೆ 25 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net