

ಕೊಪ್ಪಳ: ನಗರದ ಪಿಕಾರ್ಡ್ ಬ್ಯಾಂಕ್ಗೆ ಹೆಚ್ಚಿನ ಅನುದಾನ ನೀಡುವಂತೆ ಸಹಕಾರ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.
ನಗರದ ಪಿಕಾರ್ಡ್ ಬ್ಯಾಂಕಿನಲ್ಲಿ ಮಂಗಳವಾರ 34 ಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಸಹಕಾರ ರಂಗದಲ್ಲಿ ಬ್ಯಾಂಕುಗಳು ಉತ್ತಮ ಬಾಂಧವ್ಯ ಹೊಂದಬೇಕು. ಸಾಲ ನೀಡಿಕೆ, ಮರು ಪಾವತಿ ಪ್ರಮಾಣ ಸಮವಾಗಿರಬೇಕು. ಮಂಡಳಿ ಸದಸ್ಯರು ಈ ಬಗ್ಗೆ ಆಸಕ್ತಿವಹಿಸಿ ಸಾಲ ಮರುಪಾವತಿ ಮಾಡಿಸಬೇಕು. ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಆಗ ಬ್ಯಾಂಕ್ ಯಶಸ್ಸು ಕಾಣಲು ಸಾಧ್ಯ. ಬ್ಯಾಂಕ್ ಕಟ್ಟಡಕ್ಕೆ ಕೆಕೆಆರ್ಡಿಬಿಯಿಂದ 50 ಲಕ್ಷ ರೂ. ಅನುದಾನ ಕೊಡಿಸಲಾಗುವುದೆಂದು ಭರವಸೆ ನೀಡಿದರು.
ಮಾಜಿ ಸಂಸದ ಸಂಗಣ್ಣ ಕರಡಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲನವರ, ಉಪಾಧ್ಯಕ್ಷ ರಾಮನಗೌಡ್ರು, ಡಿಆರ್ ಪ್ರಕಾಶ ಸಜ್ಜನ್, ಪ್ರಮುಖರಾದ ಶಿವಣ್ಣ ಹಂದ್ರಾಳ, ಸಂಗನಗೌಡ, ಗವಿಸಿದ್ದಪ್ಪ ಹುಳ್ಳಿ, ನಿಂಗಜ್ಜ ಶಹಾಪುರ ಇತರರಿದ್ದರು.