ಭವನಕ್ಕೆ ಅಗತ್ಯ ನೆರವು, ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ

district koppal mla ragahavendra hitanal visit bhaqgyanagra tp
Published on

ಕೊಪ್ಪಳ: ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದೆಂದು ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು.

ತಾಲೂಕಿನ ಭಾಗ್ಯನರಗದ ಜಡೆಯ ಶಂಖರಲಿಂಗ ದೇವಸ್ಥಾನ ಭೂಮಿ ಪುಜಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ದೊಡ್ಡ ಪ್ರಮಾಣದಲ್ಲಿ ಸಮುದಾಯ ಭವನ ನಿಮಾರ್ಣಕ್ಕೆ ಕೈ ಹಾಕಿ ವಿಳಂಬವಾಗುವ ಅಥವಾ ಅರ್ಧದಲ್ಲೇ ನಿಂತು ಹೋಗುವ ಸಂಭವವಿರುತ್ತದೆ. ಸಮುದಾಯದವರು ಒಮ್ಮತದ ನಿರ್ಧಾರದಿಂದ ಮುಂದೆ ಬರಬೇಕು. ಶಾಸಕರ ಅನುದಾನದಲ್ಲಿ ಒಂದು ಸಮುದಾಯಕ್ಕೆ ಕೇವಲ 15 ಲಕ್ಷ ರೂ. ನೀಡಬಹುದು. 75&80 ಲಕ್ಷ ರೂ. ಬೇಕೆಂದರೆ ಕಷ್ಟ. ನಿವೇಶನವನ್ನು ಪಪಂ ಹೆಸರಿಗೆ ವರ್ಗಾಯಿಸಿ. ಕೆಕೆಆರ್​ಡಿಬಿ ಅಡಿ ಸರ್ಕಾರಿ ಆಸ್ತಿ ಅಭಿವೃದ್ಧಿಗೆ ಅನುದಾನ ಪಡೆಯಬಹುದು. ಪಪಂನಿಂದ ಸಮುದಾಯ ಭವನ ನಿರ್ಮಿಸಿ ಬಳಕೆ ಮತ್ತು ನಿರ್ವಹಣೆಗೆ ನಿಮ್ಮ ಸಮುದಾಯಕ್ಕೆ 33 ವರ್ಷ ಗುತ್ತಿಗೆ ನೀಡಬಹುದು. ಈ ಮೂಲಕ ಸಮುದಾಯ ಸಂಟನೆ, ಅಭಿವೃದ್ಧಿ ಸಾಧ್ಯ ಎಂದು ಸಲಹೆ ನೀಡಿದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ, ಸದಸ್ಯರಾದ ಗವಿಸಿದ್ದಪ್ಪ, ಗವಿಸಿದ್ದಯ್ಯ ಹಿರೇಮಠ, ಶಿವರಾಮ ಮ್ಯಾಗಳಮನಿ, ಮುಖ್ಯಾಧಿಕಾರಿ ಸುರೇಶ ಬಬಲಾದಿ, ಬಣಗಾರ ಸಿಂಪಿ ಸಮುದಾಯ ಗೌರವಾಧ್ಯಕ್ಷ ವೀರಣ್ಣ ಹುರಕಡ್ಲಿ, ಪ್ರಮುಖರಾದ ವೀರಣ್ಣ ಬಣಗಾರ, ಚಂದ್ರಪ್ಪ ನಾಗಲೀಕರ ಹಿಟ್ನಾಳ, ಪಂಪಾಪತಿ ರಾಟಿ ಹುಲಿಗಿ, ನಾಗರಾಜ ಹುರಕಡ್ಲಿ, ಗವೀಶ ಅಳವಂಡಿ, ನಾಗರಾಜ ಸಾಮಂತ್ರಿ, ಆಕಾಶ, ಆನಂದಪ್ಪ ಹುರಕಡ್ಲಿ, ವೀರಭದ್ರಪ್ಪ ಹುರುಕಡ್ಲಿ, ಶ್ರೀಧರ ಹುರಕಡ್ಲಿ, ಶ್ರೀಕಾಂತ ಹುರಕಡ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net