

ಕೊಪ್ಪಳ: ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ ಎಂದು ಶಾಸಕ ರಾವೇಂದ್ರ ಹಿಟ್ನಾಳ್ ಹೇಳಿದರು.
ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಲಾನುಭವಿಗಳಿಗೆ ಶನಿವಾರ ಕೃಷಿ ಪರಿಕರ ವಿತರಿಸಿ ಮಾತನಾಡಿದರು.
ರೈತರಿಗಾಗಿ ಸರ್ಕಾರ ಹಲವು ಯೋಜನೆ ರೂಪಿಸಿದೆ. ಪ್ರತಿ ಹಂತದಲ್ಲಿ ಸಹಾಯಧನ, ಕೃಷಿ ಪರಿಕರ ವಿತರಣೆಗೆ ನೆರವಾಗುತ್ತಿದೆ. ರೈರು ಯೋಜನೆಗಳನ್ನು ಪಡೆದು ಕೃಷಿಯಲ್ಲಿ ಯಶ ಕಾಣುವಂತಾಗಲಿ. ನವೀನ ಮಾದರಿ ಅನುಸರಿಸಿ ಕೃಷಿ ಮಾಡಿ. ಆರ್ಥಿಕವಾಗಿ ಸದೃಢರಾಗಿ. ಆತ್ಮಹತ್ಯೆ ಹಾದಿ ಹಿಡಿಯಬೇಡಿ. ಸ್ವಾವಲಂಬಿ ಜೀವನ ನಡೆಸಿ. ಬರ ಇನ್ನಿತರ ಕಾರಣಗಳಿಗೆ ಕುಗ್ಗದಿರಿ ಎಂದು ಸಲಹೆ ನೀಡಿದರು.
ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ತಾಲೂಕು ಅಧಿಕಾರಿಗಳು, ಸಿಬ್ಬಂದಿ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಷ, ಮಲ್ಲಿಕಾರ್ಜುನ ಪೂಜಾರ ಇತರರಿದ್ದರು.