ಪ್ರತ್ಯೇಕ ಠಾಣೆ ಆರಂಭಿಸಿ

district koppal mla janardhna reddy cm siddaramayya
Published on

ಕೊಪ್ಪಳ: ಹಂಪಿಯಲ್ಲಿ ಪೊಲೀಸ್​ ಉಪ ವಿಭಾಗ ಕಚೇರಿ ಹಾಗೂ ಆನೆಗೊಂದಿಯಲ್ಲಿ ಪ್ರತ್ಯೇಕ ಪೊಲೀಸ್​ ಠಾಣೆ ಆರಂಭಿಸುವಂತೆ ಒತ್ತಾಯಿಸಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಶುಕ್ರವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಹಂಪಿ, ಆನೆಗೊಂದಿ ವಿಶ್ವವಿಖ್ಯಾತ ಐತಿಹಾಸಿಕ ತಾಣಗಳು. ಪ್ರತಿ ವರ್ಷ ಸುಮಾರು 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಾರೆ. 3 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರದೇಶಗಳಲ್ಲಿ ಪ್ರವಾಸಿಗರು ಮತ್ತು ಸ್ಥಳಿಯ ಜನರ ಸುರಕ್ಷತೆ ಖಚಿತಪಡಿಸುವ ಅಗತ್ಯವಿದೆ. ನಾನು ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದಾಗ ಹಂಪಿಯಲ್ಲಿ ಪೊಲೀಸ್​ ಉಪ ವಿಭಾಗ ಕಚೇರಿ ಆರಂಭಿಸಲಾಗಿತ್ತು. ಗಸ್ತು ತಿರುಗಲು ಪೊಲೀಸರಿಗೆ ದ್ವಿಚಕ್ರ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದರು.

ನಂತರ ಬಂದ ಸರ್ಕಾರ ಉಪ ವಿಭಾಗ ಕಚೇರಿ ಸ್ಥಳಾಂತರಿಸಿವೆ. ಇದರಿಂದ ಹಂಪಿ ಮತ್ತು ಆನೆಗೊಂದಿ ಭಾಗದಲ್ಲಿ ಪ್ರವಾಸಿಗರ ಸುರಕ್ಷತೆಗೆ ಭಾರಿ ಹೊಡೆತ ಬಿದ್ದಿದೆ. ಇತ್ತೀಚೆಗೆ ಸಣಾಪುರದಲ್ಲಿ ಇಸ್ರೇಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಒರಿಸ್ಸಾ ವ್ಯಕ್ತಿಯ ಕೊಲೆ ಆಘಾತಕಾರಿ ವಿಷಯ. ಕೃತ್ಯ ಸದ್ಯದ ಪರಿಸ್ಥಿತಿ ಗಂಭೀರತೆಗೆ ಸಾ. ಹಂಪಿಯನ್ನು ಕೇಂದ್ರವಾಗಿಸಿ ಪೊಲೀಸ್​ ಉಪ ವಿಭಾಗ ಕಚೇರಿ ಆರಂಭಿಸಬೇಕು. ಆನೆಗೊಂದಿಯಲ್ಲೂ ಪ್ರತ್ಯೇಕ ಪೊಲೀಸ್​ ಠಾಣೆ ಆರಂಭಿಸಬೇಕು. ಪ್ರವಾಸಿಗರು ಹಾಗೂ ಸ್ಥಳಿಯರ ಭದ್ರತೆ ದೃಷ್ಟಿಯಿಂದ ಈ ಕೆಲಸ ಜರೂರಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ವಿಜಯನಗರ ಶಾಸಕ ಎಚ್​. ಆರ್​.ಗವಿಯಪ್ಪ, ಕೂಡ್ಲಿಗಿ ಶಾಸಕ ಎನ್​.ಟಿ ಶ್ರೀನಿವಾಸ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net