ಕಾಂಗ್ರೆಸ್​ಗೆ ವಿನಾಶ ಕಾಲ ಸಮೀಪ : ಜನಾರ್ದನ ರೆಡ್ಡಿ

Published on

ಕೊಪ್ಪಳ: ಕಾಂಗ್ರೆಸ್​ಗೆ ವಿನಾಶಕಾಲ ಸಮೀಪಿಸಿದ್ದು, ಅದಕ್ಕೆ ಗೂಂಡಾ ವರ್ತನೆ ತೋರುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದರು.

ಸಿ.ಟಿ.ರವಿ ಒಬ್ಬ ಸಂಭಾವಿತ ರಾಜಕಾರಣಿ. ಅವರ ಹೆಸರಿಗೆ ಮಸಿ ಬಳಿಯೊ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿ ಪ್ರಾಣಕ್ಕೆ ಕುತ್ತು ತರುವ ಕೆಲಸ ಮಾಡಿದ್ದಾರೆ. ಸಭಾಪತಿ ಅವರೇ ಯಾವುದೇ ದಾಖಲೆ ಇಲ್ಲವೆಂದು ಹೇಳಿದ್ದಾರೆ. ಯಾವುದೋ ವಿಡಿಯೋ ತೋರಿಸಿ ಆರೋಪ ಮಾಡುವುದು ಸರಿಯಲ್ಲ. ರವಿ ಏನು ಕೊಲೆ ಮಾಡಿದ್ದಾರಾ ? ಟೆರರಿಸ್ಟ್​ನಂತೆ ನಡೆಸಿಕೊಂಡಿದ್ದಾರೆ. ಓರ್ವ ವಿಪ ಸದಸ್ಯನನ್ನು ನಡೆಸಿಕೊಳ್ಳುವ ರೀತಿ ಇದಾ ಎಂದು ಶುಕ್ರವಾರ ಸುದ್ದಿಗಾರರ ಮೂಲಕ ಸರ್ಕಾರಕ್ಕೆ ಪ್ರಶ್ನಿಸಿದರು.

ರಾಜ್ಯದಲ್ಲಿ ಆಡಳಿತ ವಿಲವಾಗಿದೆ. ಪೊಲೀಸರನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ರವಿ ಮೇಲೆ ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net