ಹುಬ್ಬಳ್ಳಿ-ಕುಷ್ಟಗಿ ರೈಲ್ವೆ ಸೇವೆ ಶ್ರೀ, ಶಾಸಕ ರಾಯರಡ್ಡಿ ಮಾಹಿತಿ

district koppal mla basavaraj rayaraddi gadag wadli railway line
ಬಸವರಾಜ ರಾಯರಡ್ಡಿ
Published on

ಕೊಪ್ಪಳ: ಗದಗ&ವಾಡಿ ರೈಲವೆ ಯೋಜನೆ ಕುಷ್ಟಗಿವರೆಗೆ ಪೂರ್ಣಗೊಂಡಿದೆ. ರೈಲು ಸಂಚಾರ ಆರಂಭಕ್ಕೆ ಅನುಮತಿ ಕೋರಿ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗಿದೆ. ದಿನಾಂಕ ನಿಗದಿಪಡಿಸಿ ಚಾಲನೆ ನೀಡಲಾಗುವುದೆಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದರು.

ಈ ಯೋಜನೆ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕವನ್ನು ಬೆಸೆಯಲಿದೆ. ಭವಿಷ್ಯದಲ್ಲಿ ಉತ್ತಮ ಆರ್ಥಿಕ ಚಟುವಟಿಕೆಗೆ ಪೂರಕವಾಗಿದೆ. ಬಹುದಿನಗಳ ಕನಸಾಗಿದ್ದು, ಸದ್ಯ ಈಡೇರುವ ಕಾಲ ಬಂದಿದೆ. ಹುಬ್ಬಳ್ಳಿ, ಗದಗ, ಯಲಬುರ್ಗಾ, ಕುಕನೂರು, ಕುಷ್ಟಗಿ, ಮುದಗಲ್​, ಲಿಂಗಸೂರು, ಹಟ್ಟಿ ಚಿನ್ನದ ಗಣಿ, ಸುರಪುರ, ಶಹಪುರದಿಂದ ವಾಡಿ ಸಂಪರ್ಕಿಸಲಿದೆ. ಗೋವಾ&ಹೈದ್ರಾಬಾದ್​, ಗೋವಾ&ದೆಹಲಿಗೆ ಮುಖ್ಯ ರೈಲ್ವೆ ಸಂಪರ್ಕವಾಗಲಿದೆ. ಹುಬ್ಬಳ್ಳಿ&ಸೋಲ್ಲಾಪುರ, ಹುಬ್ಬಳ್ಳಿ&ಬೀದರ್​ ಮಾರ್ಗಕ್ಕೂ ಅನುಕೂಲ. ಈ ಭಾಗದ ಜನರಿಗೆ ಸಾಕಷ್ಟು ನೆರವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನಾನು ಸಂಸದನಾಗಿದ್ದಾಗ ಮುನಿರಾಬಾದ್​&ಮೆಹಬೂಬ್​ ನಗರ, ಗದಗ&ವಾಡಿ ಯೋಜನೆಗಳ ಜಾರಿಗೆ ಶ್ರಮಿಸಿದ್ದೆ. ಗದಗ&ವಾಡಿ ಯೋಜನೆ ಕೇಂದ್ರ&ರಾಜ್ಯ ಸರ್ಕಾರದ 50:50 ಜಾರಿಯಾಗುತ್ತಿದೆ. ರಾಜ್ಯ ಸರ್ಕಾರವೇ ಸಂಪೂರ್ಣ ಭೂಸ್ವಾಧಿನ ಮಾಡಿಕೊಟ್ಟಿದೆ. ಇನ್ನು 2&3 ವರ್ಷದಲ್ಲಿ ಯೋಜನೆಗಳು ಪೂರ್ಣಗೊಳ್ಳುವ ವಿಶ್ವಾಸವಿದೆ. ಗದಗ&ವಾಡಿ ಕುಷ್ಟಗಿವರೆಗೆ 58 ಕಿ.ಮೀ., ವಾಡಿಯಿಂದ ಶಹಾಪುರವರೆಗೆ 48 ಕಿ.ಮೀ. ಮುಗಿದಿದೆ. ಬಾಕಿ 165 ಕಿ.ಮೀ. ಕಾಮಗಾರಿಗೆ ಟೆಂಡರ್​ ಕರೆಯಲಾಗಿದೆ. ಸದ್ಯ ಕುಷ್ಟಗಿವರೆಗೆ ಸಂಚಾರ ಆರಂಭಿಸಬೇಕಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ಗೆ ಪತ್ರ ಬರೆದಿದ್ದು ದಿನಾಂಕ ಕೋರಲಾಗಿದೆ ಎಂದು ಹೇಳಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಗದಗ&ವಾಡಿ ಮಹತ್ವಕಾಂ ಯೋಜನೆ. ಇದರಿಂದ ಈ ಭಾಗ ತ್ವರಿತವಾಗಿ ಅಭಿವೃದ್ಧಿಯಾಗುವುದು. ಕುಷ್ಟಗಿವೆಗೆ ಕಾಮಗಾರಿ ಮುಗಿದಿದೆ. ಪ್ರಾಯೋಗಿಕ ರೈಲು ಸಂಚಾರವೂ ನಡೆದಿದೆ. ಆದಷ್ಟು ಬೇಗ ಉದ್ಘಾಟನೆ ಮಾಡಲಾಗುವುದೆಂದರು.

ನಗರಸಭೆ ಸದಸ್ಯರಾದ ಮಹೇಂದ್ರ ಚೋಪ್ರಾ, ಮುತ್ತುರಾಜ ಕುಷ್ಟಗಿ, ಲೋಕೋಪಯೋಗಿ ಇಲಾಖೆ ಇಇ ಹೇಮಂತರಾಜ್​, ವಾರ್ತಾಧಿಕಾರಿ ಡಾ.ಸುರೇಶ ಜಿ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net