ಎರಡು ಅಂಗಡಿ ಪರವಾನಗಿ ರದ್ದು

Published on

ಕೊಪ್ಪಳ: ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಎರಡು ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಎಸ್​.ರುದ್ರೇಶಪ್ಪ ತಿಳಿಸಿದ್ದಾರೆ.

ಕನಕಗಿರಿ ತಾಲೂಕಿನ ಮುಸಲಾಪುರದ ಮೆ>> ಸಜ್ಜಲಶ್ರೀ ಆಗ್ರೋ ಕೇಂದ್ರ ಮತ್ತು ಕೊಪ್ಪಳ ತಾಲೂಕಿನ ಇರಕಲ್​ಗಡಾದ ಮೆ>> ಸ್ಪಂದನ ಆಗ್ರೋ ಟ್ರೇಡರ್ಸ್​ ರಸಗೊಬ್ಬರ ಮಾರಾಟ ಪರವಾನಗಿಯನ್ನು ರಸಗೊಬ್ಬರ ನಿಯಂತ್ರಣ ಆದೇಶ 1985 ರ ಕ್ಲಾಸ್​ 3, 4, 5, 8 ಮತ್ತು 35 ರ ಉಲ್ಲಂಘನೆ ಹಿನ್ನೆಲೆ ರದ್ದುಪಡಿಸಲಾಗಿದೆ. ಜಿಲ್ಲೆಗೆ ಬೇಡಿಕೆ ಅನ್ವಯ ಕೃಷಿ ಪರಿಕರ ಮಾರಾಟ ಮಳಿಗೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳ ಮೂಲಕ ರೈತರಿಗೆ ರಸಗೊಬ್ಬರ ವಿತರಿಸಲಾಗುತ್ತಿದೆ. ಅಂಗಡಿಗಳ ಮೇಲೆ ನಿಗಾವಹಿಸಿದ್ದು ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ. ಮುಸಲಾಪುರ ಹಾಗೂ ಇರಕಲ್​ ಗಡಾದಲ್ಲಿ ಎರಡು ಅಂಗಡಿಗಳಲ್ಲಿ ಜಾಗೃತದಳ ಅಧಿಕಾರಿಗಳು ತಪಾಸಣೆ ನಡೆಸಿದಾಗ ನಿಯಮ ಉಲ್ಲಂಘಿಸಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net