ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ, ಸಚಿವ ಶಿವರಾಜ ತಂಗಡಗಿ ಹೇಳಿಕೆ

district koppal minister shivaraj tangadagi visit gavi nayak murder case
Published on

ಕೊಪ್ಪಳ: ಗವಿ ನಾಯಕ ಸಣ್ಣ ವಯಸ್ಸಿನ ಹುಡುಗ. ಕೊಲೆ ಆಗಬಾರದಿತ್ತು. ತಪ್ಪೆಸಗಿದವರಿಗೆ ಶಿಕ್ಷೆ ಆಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇತ್ತೀಚೆಗೆ ಕೊಲೆಯಾದ ನಗರದ ಕುರುಬರ ಓಣಿ ನಿವಾಸಿ ಗವಿ ನಾಯಕ (27) ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬದವರಿಎಗ ಸಾಂತ್ವಾನ ಹೇಳಿ ಮಾತನಾಡಿದರು.

ಕೊಪ್ಪಳದಲ್ಲಿ ಕೊಲೆ ಆಗಿದ್ದು ದುರಂತ. ಮಕ್ಕಳನ್ನು ಕಳೆದುಕೊಂಡಾಗ ಪಾಲಕರಿಗೆ ಸಾಕಷ್ಟು ನೋವಾಗುತ್ತದೆ. ತಪು$್ಪ ಮಾಡಿದವರಿಗೆ ಖಂಡಿತ ಶಿೆ ಆಗಲಿದೆ. ಅದರಲ್ಲಿ ಯಾವುದೇ ರಾಜೀ ಇಲ್ಲ. ನಾವು ಏನೇ ಮಾಡಿದರೂ ತಂದೆ&ತಾಯಿಗೆ ಅವರ ಮಗನನ್ನು ತಂದು ಕೊಡಲಾಗುವುದಿಲ್ಲ. ಸರ್ಕಾರದಿಂದ ಸಿಗುವ ನೆರವು ಕಲ್ಪಿಸಲಾಗುವುದು. ಪ್ರಕರಣದಲ್ಲಿ ಯುವತಿ ಪ್ರಾತ ಏನೆಂಬ ಬಗ್ಗೆ ತನಿಖೆ ಆಗಲಿದೆ. ಸದ್ಯ ತನಿಖೆ ಚುರುಕು ಪಡೆದಿದೆ. ಈ ಹಂತದಲ್ಲಿ ಎಲ್ಲವನ್ನೂ ಹೇಳಲಾಗದು.

ರಾಜಕಾರಣಿಗಳು ಪೊಲೀಸರ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಸ್ವತಂತ್ರವಾಗಿ ತನಿಖೆ ನಡೆಯುತ್ತಿದೆ. ಪಾಲಕರಿಗೆ ಸಾಂತ್ವಾನ ಹೇಳುವ ಕೆಲಸ ಮಾಡೋಣ. ಪ್ರತಿಭಟನೆ ಮತ್ತೊಂದು ಮಾಡುವ ಬದಲು ಅವರ ನೋವಿನಲ್ಲಿ ಭಾಗಿಯಾಗೋಣ. ಗಂಗಾವತಿ ಮತ್ತು ಕೊಪ್ಪಳದಲ್ಲಿ ಗಾಂಜಾ ಜಾಲ ಇರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆಯಿಂದ 4 ಲಕ್ಷ ರೂ. ನೆರವು ಚೆಕ್​ ವಿತರಿಸಿದರು. ಜತೆಗೆ ಸಚಿವ, ಶಾಸಕರು ವೈಯಕ್ತಿಕ ನೆರವು ನೀಡಿದರು. ಮನೆ ಭೇಟಿಗೂ ಮುನ್ನ ಅಧಿಕಾರಿಗಳು ಹಾಗೂ ಸಮುದಾಯ ನಾಯಕರೊಡನೆ ಸಭೆ ನಡೆಸಿ ಮಾಹಿತಿ ಪಡೆದರು. ಶಾಸಕ ರಾವೇಂದ್ರ ಹಿಟ್ನಾಳ, ನಗಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಸೇರಿ ವಾಲ್ಮೀಕಿ ಸಮುದಾಯ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net