

ಕೊಪ್ಪಳ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು, ಅಧಿಕಾರಿಗಳು ಶ್ರಮಿಸಿ. ಟಾಪ್ 10ರಲ್ಲಿ ಕೊಪ್ಪಳ ಜಿಲ್ಲೆ ಹೆಸರಿರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮುಖ್ಯಶಿಕ್ಷಕರು, ಶಿಕ್ಷಣಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಮುಖ್ಯ ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಮಕ್ಕಳಿಗೆ ಅರ್ಥವಾಗುವಂತೆ ಬೋಧಿಸಿ. ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವುದನ್ನು ಅಭ್ಯಾಸ ಮಾಡಿಸಿ. ಎಸ್ಸೆಸ್ಸೆಲ್ಸಿ ಹಂತ ಪ್ರತಿ ವಿದ್ಯಾರ್ಥಿ ಜೀವನದ ಪ್ರಮುಖ ಟ್ಟ. ವಿದ್ಯಾರ್ಥಿಗಳು ಪಾಲಕರಿಗಿಂತ ಗುರುಗಳಿಗೆ ಹೆಚ್ಚು ಗೌರವ ನೀಡುತ್ತಾರೆ. ಅವರು ಉತ್ತೀರ್ಣರಾಗುವಂತೆ ಮಾಡಿ. ಅವರ ಭವಿಷ್ಯ ರೂಪಿಸುವ ಶಕ್ತಿ ನಿಮ್ಮಲ್ಲಿ ಅಡಗಿದೆ. ವಾರ್ಷಿಕ ಪರೀೆಗಳಿಗೆ 47 ದಿನಗಳಿವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳೆಡೆಗೆ ವಿಶೇಷ ಗಮನ ಹರಿಸಿ. ಅವರಿಗೆ ಅರ್ಥವಾಗುವಂತೆ ಪಾಠ ಮಾಡಿ. ಬಿಇಒಗಳು ಆಗಾಗ ಶಾಲೆಗಳಿಗೆ ಭೇಟಿ ನೀಡಿ. ಶೇ.100ರಷ್ಟು ಲಿತಾಂಶ ಬರುವ ಶಾಲೆಗೆ ಬಹುಮಾನ ನೀಡಿ ಎಂದರು.
ಡಿಸಿ ನಲಿನ್ ಅತುಲ್ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಪಾಸ್ ಆಗಲು ಬೇಕಾಗುವ ಕನಿಷ್ಟ ವಿಷಯ ಮನವರಿಕೆ ಮಾಡಿಸಿ. ಸಾಮಾನ್ಯ ಜ್ಞಾನ ಹೇಳಿಕೊಡಿ. ವಿಶೇಷ ತರಗತಿಗಳ ಮೂಲಕ ಕಲಿಕಾ ಗುಣಮಟ್ಟ ಹೆಚ್ಚಿಸಿ. ಮುಖ್ಯ ಶಿಕ್ಷಕರು ನಿಮ್ಮ ಶಾಲೆ ಶೇ.100ರಷ್ಟು ಲಿತಾಂಶ ಪಡೆಯುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಮಾತನಾಡಿ, ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಕಲಿಕಾ ಗುಣಮಟ್ಟ ಹೆಚ್ಚಳಕ್ಕೆ ನಿಗಾವಹಿಸಲಾಗಿದೆ. ಮುಖ್ಯ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿದೆ. ಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒಗಳು ಇತರರಿದ್ದರು.