

ಕೊಪ್ಪಳ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ಗಳು ನಿಯಮ ಮೀರಿ ಬಡವರಿಂದ ಹಣ ವಸೂಲಿ ಮಾಡುವ ಪ್ರಕರಣ ಕಂಡುಬಂದಲ್ಲಿ ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಷ್ಟು ಕಿರು ಸಾಲ ನೀಡುವ ೈನಾನ್ಸ್ಗಳು ನೋಂದಣಿ ಆಗಿವೆ. ಆಗದಿರುವರು ಎಷ್ಟು ? ನೋಂದಣಿ ಆದವರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರಾ ? ಈ ಬಗ್ಗೆ ಎಲ್ಲರಿಯಾದರೂ ದೂರು ಬಂದಿವೆಯಾ ಪರಿಶೀಲಿಸಿ. ಕೆಲವರು ನಿಯಮ ಮೀರಿ ದಿನ ಲೆಕ್ಕದಲ್ಲಿ ಬಡ್ಡಿ ವಸೂಲಿ ಮಾಡುತ್ತಾರೆ. ವಿಶೇಷವಾಗಿ ಗಂಗಾವತಿ, ಕಾರಟಗಿ ಭಾಗದಲ್ಲಿ ಅಂಥವರು ಹೆಚ್ಚಿದ್ದು, ನಿಗಾವಹಿಸಿ. ವ್ಯಾಪಾರ ವಹಿವಾಟಿಗೆ ಬ್ಯಾಂಕ್, ೈನಾನ್ಸ್ಗಳು ಬೇಕು. ಆದರೆ, ಅವರು ತಮ್ಮ ಇತಿಮಿತಿಯಲ್ಲಿ ವ್ಯವಹರಿಸಬೇಕು. ಕಿರುಕುಳ ನೀಡುತ್ತಿದ್ದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಡಿಸಿ ನಲಿನ್ ಅತುಲ್ ಮಾತನಾಡಿ, ಜನರು ಮೈಕ್ರೋ ಫೈನಾನ್ಸಗಳಿಂದ ಸಾಲ ಪಡೆಯುವ ಮುನ್ನ ಬಡ್ಡಿದರ. ಇಎಂಐ, ಮರು ಪಾವತಿ ನಿಯಮಗಳನ್ನು ತಿಳಿಯಬೇಕು. ಫೈನಾನ್ಸ್ ಕಂಪನಿಗಳ ವಿರುದ್ಧ ದೂರು ಬಂದಾಗ, ಅವರು ನಿಯಮಗಳು ಪಾಲನೆ ಮಾಡಿದ್ದಾರೆಯೆ ? ಫೈನಾನ್ಸಗಳ ನಿಯಮ ಏನಿವೆ ಎಂದು ಪೊಲೀಸರು ಪರಿಶೀಸಿ. ಬಳಿಕ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಎಸ್ಪಿ ಹೇಮಂತ್ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ವೀರೇಂದ್ರ ಕುಮಾರ್ ಇತರರಿದ್ದರು.