

ಕೊಪ್ಪಳ: ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ವಿವಿಧ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಕಾಲವಧಿಯೊಳಗೆ ಕಾಮಗಾರಿ ಮುಗಿಸದಿದ್ದರೆ ರೈತರಿಗೆ ನೀರು ಕೊಡುವುದು ಯಾವಾಗ ? ಹಲವು ವರ್ಷಗಳಾದರೂ ಕೆಲ ಯೋಜನೆಗಳು ಮುಗಿವ ಲಕ್ಷಣಗಳಿಲ್ಲ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕಾಲವಧಿಯೊಳಗೆ ಕಾಮಗಾರಿ ಮುಗಿಸಬೇಕು. ಅಳವಂಡಿ&ಬೆಟಗೇರಿ ಏತ ನೀರಾವರಿ ಯೋಜನೆ ಈ ಮಾಸಾಂತ್ಯಕ್ಕೆ ಮುಗಿಸಿ. ಸಿಂಗಟಾಲೂರು ಏತ ನೀರಾವರಿ ಹತ್ತಾರು ವರ್ಷದಿಂದ ಕುಂಟುತ್ತಿದೆ. ಏನಾಗಿದೆ ಎಂಬ ಅಸಲಿ ವರದಿ ನೀಡಿ. ಮರು ಚಾಲನೆಗೊಳಿಸಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಇನ್ನೊಮ್ಮೆ ಸಭೆ ಕರೆಯುತ್ತೇನೆ. ಅಷ್ಟರಲ್ಲಿ ಪ್ರಗತಿ ಸಾಧನೆಯಾಗಿರಬೇಕು. ಕೆಲಸ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡಿ. ಕಪು$್ಪ ಪಟ್ಟಿಗೆ ಸೇರಿಸಿ. ಕೆರೆಗಳನ್ನು ವೀಸುವೆ. ಕಾಟಾಪುರ, ಶಿರವಾರ, ಕರಡೋಣ ಕೆರೆಗಳಿಗೆ ನೀರು ತುಂಬಿಸಿ. ಈಗ ಕೆರೆಗಳು ತುಂಬಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದು. ಇಂದು ಸೂಚಿಸಿದ ಎಲ್ಲ ವಿಷಯಗಳು ಗಮನದಲ್ಲಿರಲಿ ಎಂದು ಎಚ್ಚರಿಕೆ ನೀಡಿದರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆಗೆ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ. 18 ತಿಂಗಳಲ್ಲಿ ಮುಗಿವ ಕಾಮಗಾರಿಗಳು ಏಳು ವರ್ಷವಾದರೂ ಆಗುತ್ತಿಲ್ಲ. ಆಗಾಗ ಸಭೆ ನಡೆಸಿದರೆ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಸಿಗಲಿದೆ ಎಂದು ಸಲಹೆ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ನಲಿನ್ ಅತುಲ್, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾ.ಮಹೇಶ್ ಮಾಲಗಿತ್ತಿ, ಕೆಬಿಜೆಎನ್ಎಲ್ ಹಾಗೂ ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿದ್ದರು.