ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲುವು, ಸಚಿವ ಶಿವರಾಜ ತಂಗಡಗಿ ವಿಶ್ವಾಸ

district koppal minister shivaraj tangadagi bspl company issue
SHIVARAJ TANGADAGI
Published on

ಕೊಪ್ಪಳ: ಸಂಡೂರು, ಶಿಗ್ಗಾಂವ್​&ಸವಣೂರು ಮತ್ತು ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದರು.

ನಾನು ಸಂಡೂರು ಮತ್ತು ಶಿಗ್ಗಾಂವ್​ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿರುವೆ. ನನಗಿರುವ ಮಾಹಿತಿ ಪ್ರಕಾರ ಸಂಡೂರಿನಲ್ಲಿ ಸುಮಾರು 25 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ. ಶಿಗ್ಗಾಂವ್​ನಲ್ಲೂ 10ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್​ ಗೆಲ್ಲುವುದು. ನಾನು ಚನ್ನಪಟ್ಟಣಕ್ಕೆ ಹೋಗಿಲ್ಲ. ಆದರೂ ನಮ್ಮ ಪಕ್ಷದ ನಾಯಕರು ನೀಡಿದ ಮಾಹಿತಿಯಂತೆ ಸ್ವಲ್ಪ ಮತಗಳ ಅಂತರದಲ್ಲಾದರೂ ಗೆಲುವು ಸಾಧಿಸಲಿದ್ದೇವೆ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿ, ಸಚಿವ ಜಮೀರ್​ಖಾನ್​ ಇಬ್ಬರು ಗೆಳೆಯರು. ಗೆಳೆತನದಲ್ಲಿ ತಮ್ಮ ತಮ್ಮ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ಮಾತನಾಡಿರಬಹುದು. ಈ ಬಗ್ಗೆ ನನಗೆ ಹೆಚ್ಚೆನೂ ಗೊತ್ತಿಲ್ಲ. ಶಾಸಕರ ಖರೀದಿ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಎಂದಿಗೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಅವರು ಅಂಥದ್ದರಲ್ಲಿ ನಿಸ್ಸೀಮರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ, ಅದು ಲಿಸುವುದಿಲ್ಲ. ಈ ಹಿಂದೆ ಶಾಸಕರನ್ನು ಖರೀದಿಸಿದಾಗ ದುಡ್ಡು ಎಲ್ಲಿಂದ ಬಂತು ? ಮೋದಿ, ಅಮಿತ್​ ಶಾ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು.

ಕೆಕೆಆರ್​ಡಿಬಿ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ನಿಯಮಾವಳಿಯಂತೆ ಅನುದಾನ ಬಿಡುಗಡೆಯಾಗಿದೆ. ಮಳೆ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ನಿನ್ನೆಯೂ ಮಳೆಯಿಂದ ಕೆಲವೆಡೆ ಭತ್ತ ಹಾನಿಯಾಗಿದೆ. ಸಮೀೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net