ಕಾರ್ಖಾನೆ ವಿಷಯದಲ್ಲಿ ನಾವು ಜನಪರ, ಸಚಿವ ಶಿವರಾಜ ತಂಗಡಗಿ ಭರವಸೆ

district koppal minister shivaraj tangadagi bspl company issue
SHIVARAJ TANGADAGI
Published on

ಕೊಪ್ಪಳ: ಬಿಎಸ್​ಪಿಎಲ್​ ಕಾರ್ಖಾನೆ ವಿಷಯದಲ್ಲಿ ನಾವು ಯಾವಾಗಲೂ ಜನಪರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಾರ್ಖಾನೆ ವಿರೋಧಿಸಿ ೆ.24ರಂದು ಬಂದ್​ ಕರೆ ನೀಡಿರುವ ಬಗ್ಗೆ, ಗವಿಶ್ರೀಗಳು ಬೆಂಬಲ ನೀಡಿದ ಬಗ್ಗೆ ಮಾಹಿತಿ ಇದೆ. ಶ್ರೀಗಳೊಂದಿಗೆ ನಾನೂ ಮಾತನಾಡಿರುವೆ. ಪಾತೀತವಾಗಿ ಎಲ್ಲರೂ ಬೆಂಬಲಿಸಿದ್ದಾರೆ. ಶಾಸಕ, ಸಂಸದರು ಮತ್ತು ನಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚಿಸಿರುವೆ. ಸಿಎಂ ಗಮನಕ್ಕೂ ತಂದಿರುವೆ. ಜನರ ಭಾವನೆ ವಿರುದ್ಧ ನಾನು ಕೆಲಸ ಮಾಡುವುದಿಲ್ಲ ಎಂದು ಭಾನುವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

ಕೆಲವರು ಕಾರ್ಖಾನೆ ಪರವಾಗಿರುವುದು ಗೊತ್ತಿಲ್ಲ. ನಮ್ಮಲ್ಲಿ ಯಾವುದೇ ದ್ವಂದ್ವ ಇಲ್ಲ. ಸರ್ವ ಪಕ್ಷ ನಿಯೋಗದೊಂದಿಗೆ ಸಿಎಂ ಭೇಟಿ ಮಾಡುತ್ತೇವೆ. ಈ ಭಾಗದ ಜನ ಆರೋಗ್ಯದಿಂದ ಬದುಕಬೇಕು. ಜನರ ಅಗತ್ಯತೆ ಬಗ್ಗೆ ಸರ್ಕಾರ ಚಿಂತಿಸಲಿದೆ. ಹಲವು ವರ್ಷಗಳ ಹಿಂದೆಯೇ ಕಾರ್ಖಾನೆ ಆರಂಭ ಚಟುವಟಿಕೆ ಶುರುವಾಗಿವೆ. ಜನರು ಈಗ ವಿರೋಧ ಮಾಡುತ್ತಿದ್ದಾರೆ. ಹಿಂದೆ ಕಾರ್ಖಾನೆಗಳಿಂದ ಆಗುತ್ತಿರುವ ಹಾನಿ ಬಗ್ಗೆ ಸಮಿತಿ ರಚಿಸಿದ್ದು ನನ್ನ ಗಮನಕ್ಕಿಲ್ಲ. ಡಿಸಿಯೊಂದಿಗೆ ಮಾಹಿತಿ ಪಡೆಯುವೆ. ಈ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net